ಸ್ಥಳೀಯ ಸುದ್ದಿ

ಧಾರವಾಡ ಜಿಲ್ಲೆಯಲ್ಲಿ ಐಐಐಟಿ ಉದ್ಘಾಟನೆ ಮಾಡಿದ ರಾಷ್ಟ್ರಪತಿ

ಧಾರವಾಡ

ವಿದ್ಯಾಕಾಶಿ ಎಂದೇ ಹೆಸರು ಪಡೆದಿರುವ ಧಾರವಾಡ ಜಿಲ್ಲೆಯಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರವಾಸ ಮಾಡಿ, ದೇಶದ ಹೆಮ್ಮೆಯ ಐಐಐಟಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದ್ರು.
ಈ ಕಟ್ಟಡದ ಸ್ಥಾಪನೆಗೆ ಈ ಹಿಂದೆ ಪ್ರಧಾನಿ ಮೋದಿ ಅವರು ಶಂಕು ಸ್ಥಾಪನೆ ಮಾಡಿದ್ರೆ, ರಾಷ್ಟ್ರಪತಿ ಇವರು ಕಟ್ಟಡ ಲೋಕಾರ್ಪಣೆ ಮಾಡಿದ್ದು, ಧಾರವಾಡ ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
ಐತಿಹಾಸಿಕವಾಗಿರುವ ಈ ಕಾಯಕ್ರಮದಲ್ಲಿ ರಾಷ್ಟ್ರಪತಿಗೆ ಇಳಕಲ್​ ಸೀರೆ, ರಾಯಚೂರಿನಲ್ಲಿ ತಯಾರಿ ಮಾಡಿದ ಕೌದಿಯನ್ನು ಗೀಪ್ಟ್​ ಕೊಡಲಾಯಿತು.

ಇಂದು ಧಾರವಾಡ ಜಿಲ್ಲೆಯ ಜನರು ಎಲ್ಲರೂ ಹೆಮ್ಮೆ ಪಡುವಂತಹ ದಿನ. ಏಕೆಂದ್ರೆ ರಾಷ್ಟ್ರಪತಿ ಅವರು ಧಾರವಾಡಕ್ಕೆ ಐಐಐಟಿ ಕೇಂದ್ರದ ಕಟ್ಟಡವನ್ನು ಉದ್ಘಾಟನೆ ಮಾಡಿದ್ರು.
ಮಧ್ಯಾಹ್ನ 3 ಗಂಟೆಯ ನಂತರ ಆಗಮಿಸಿದ ರಾಷ್ಟ್ರಪತಿ ಅವರಿಗೆ ಇನ್ಪೋಸಿಸ್​ ಸಂಸ್ಥಾಪಕಿ ಸುಧಾಮೂರ್ತಿ ಅವರು ಸ್ವಾಗತ ಕೋರಿದ್ರು. ಅವರು ರಿಮೋಟ್​ ಬಟನ್​ ಮೂಲಕ ಐಐಐಟಿ ಕಟ್ಟಡದ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದ ವೇದಿಕೆಯಲ್ಲಿ ಕೆವಲ 9 ಮಂದಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಮೊದಲ ಸಾಲಿನಲ್ಲಿ
ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್​, ಹಾಗೂ ಇನ್ಪೋಸಿಸ್​ ಸಂಸ್ಥಾಪಕಿ ಸುರ್ಧಾಮೂರ್ತಿ ಇದ್ದರು. ಈ ವೇಳೆ ಮಾತನಾಡಿದ ರಾಷ್ಟ್ರಪತಿ ಅವರು, ಐಐಐಟಿ ಕಟ್ಟಡವಾಗಲು ಸುಧಾಮೂರ್ತಿ ಅವರು,
ತನುಮನ ಧನದಿಂದ ಕೆಲಸ ಮಾಡಿದ್ದಾರೆ. ಮೊದಲು ನಾನು ಅವರಿಗೆ ಕೃತಜ್ಞತೆ ಸಲ್ಲಿಸುವೆ. ಭಾರತವನ್ನು ವಿಶ್ವಗುರು ಮಾಡುವುದು ಐಐಐಟಿ ಉದ್ದೇಶವಾಗಿದೆ. ಹೊಸ ಶಿಕ್ಷಣ ನೀತಿ 2020 ರಲ್ಲಿ ತಾಂತ್ರಿಕ ಶಿಕ್ಷಣದ ಬಗ್ಗೆ ತಿಳಿಸಲಾಗಿದೆ. ಧಾರವಾಡದಲ್ಲಿ ಐಐಐಟಿ ಇರುವುದು
ಇಲ್ಲಿನ ಜನರ ಹೆಮ್ಮೆ. ಬರುವ ದಿನಗಳಲ್ಲಿ ದೇಶಕ್ಕೆ ಕೀರ್ತಿ ತರುವಂತಹ ಕೆಲಸ ಈ ಸಂಸ್ಥೆ ಮಾಡಲಿ ಎಂದರು. ಇಂತಹ ಕಟ್ಟಡದ ಉದ್ಘಾಟನೆ ನಾನು ಮಾಡಿದ್ದು ನನ್ನ ಸೌಭಾಗ್ಯ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು ಕರ್ನಾಟಕ ಶಿಕ್ಷಣದ ಜೋತೆಗೆ ಐಟಿ ಹಬ್​ ಕೂಡ ಆಗಿದೆ. ಐಐಐಟಿ ಉದ್ಘಾಟನೆಗೆ ರಾಷ್ಟ್ರಪತಿಗಳು ಆಗಮಿಸಿದ್ದು ನಮ್ಮೇಲ್ಲರ ಹೆಮ್ಮೆ.
ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡಿ ತೋರಿಸಲಿ ಎಂದರು. ಇದೇ ವೇಳೆ ಮಾತನಾಡಿದ ಇನ್ಪೋಸಿಸ್​ ಸಂಸ್ಥಾಪಕಿ ಸುಧಾ ಮೂರ್ತಿ ನನ್ನ ತವರು ಜಿಲ್ಲೆಯಲ್ಲಿ ಐಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ಅವರು ಬಂದಿದ್ದು, ನಮ್ಮೇಲ್ಲರ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಷ್ಟ್ರಪತಿ ಅವರ ಬದುಕು ನಮಗೆಲ್ಲಾ ಪ್ರೇರಣೆ. ಐಐಐಟಿ ಭಾರತಕ್ಕೆ ಭವಿಷ್ಯ ಕೊಡಲಿದೆ. ಕಟ್ಟಡಕ್ಕಾಗಿ ರೈತರು ತ್ಯಾಗ
ಮಾಡಿ ಜಮೀನು ಕೊಟ್ಟಿದ್ದಾರೆ. ಅವರ ಶ್ರಮ ವ್ಯರ್ಥವಾಗಬಾರದು. ಐಐಐಟಿ ದೇಶದ ನಂಬರ 1 ಸಂಸ್ಥೆಯಾಗಲಿ ಎಂದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಟ್ಟಡದ ಶಂಕು ಸ್ಥಾಪನೆಯನ್ನು ಪ್ರಧಾನಿ ಮಾಡಿದ್ದು, ಉದ್ಘಾಟನೆಯನ್ನು
ರಾಷ್ಟ್ರಪತಿ ಅವರು ಮಾಡಿದ್ದು ನಮಗೆಲ್ಲಾ ಹೆಮ್ಮೆ. ಐಐಐಟಿ ತಂತ್ರಜ್ಞಾನದಿಂದ ಬಡವರಿಗೆ ಅನುಕೂಲವಾಗಲಿದೆ. ಇದೇ ರೀತಿಯಲ್ಲಿ 2022 ರ ಐಐಟಿ ಕಟ್ಟಡವನ್ನು ಪ್ರಧಾನಿ ಮೋದಿ ಅವರಿಂದ ಮಾಡಿಸಲಾಗುವುದು ಎಂದರು.

ರಾಷ್ಟ್ರಪತಿಗಳ ಕಾರ್ಯಕ್ರಮವಾಗಿದ್ದರಿಂದ, ವೇದಿಕೆಯ ಕೆಳಗಡೆ ಸಾಲಿನಲ್ಲಿ ಮುಂಭಾಗದಲ್ಲಿ ಸಚಿವರಾದ ಹಾಲಪ್ಪಾ ಆಚಾರ, ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ಅರವಿಂದ
ಬೆಲ್ಲದ, ಪ್ರಸಾದ ಅಬ್ಬಯ್ಯಾ ಹಾಜರಿದ್ದರು. ಇನ್ನು ಕಾರ್ಯಕ್ರಮದಲ್ಲಿ ರಾಯಚೂರು ಮೂಲದ ದೇವದಾಸಿಯರು 3 ಸಾವಿರ ಹೊಲಿಗೆ ಹಾಕಿದ ಕೌದಿ ಕೊಡಲಾಗಿದೆ ಎಂದು ಸುಧಾ ಮೂರ್ತಿ ತಿಳಿಸಿದ್ರು. ರಾಷ್ಟ್ರಪತಿಗೆ ಉತ್ತರ ಕರ್ನಾಟಕದ
ಖಡಕ್ ಜೋಳದ ರೊಟ್ಟಿ, ಚಪಾತಿ, ಮುಳುಗಾಯಿ ಪಲ್ಲೆ, ಗೋಧಿ ಹುಗ್ಗಿ ಮಾಡಿಸಲಾಗಿತ್ತು.

ಅತ್ಯಂತ ಬೀಗಿ ಭದ್ರತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 700 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಅತ್ಯಂತ
ಯಶಸ್ವಿಯಾಗಿ ಅಚ್ಚುಕಟ್ಟಾಗಿ ಐಐಐಟಿ ಕಟ್ಟಡದ ಉದ್ಟಾಟನೆ ಧಾರವಾಡ ಜಿಲ್ಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಅರುಣ ಜೋಶಿ, ಜಿಲ್ಲಾಧಿಕಾರಿ , ಎಸಪಿ, ಮಹಾನಗರ ಪಾಲಿಕೆ ಆಯಕ್ತ, ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button