
ಮಾನವೀಯತೆಗೆ ಹೆಸರಾಯಿತು ಎಸಡಿಎಂ ಆಸ್ಪತ್ರೆ..
ಧಾರವಾಡ
ಧಾರವಾಡದ ಎಸಡಿಎಂ ಆಸ್ಪತ್ರೆಯವರು ಮತ್ತೊಂದು ರೀತಿಯಲ್ಲಿ ಮಾನವೀಯತೆ ದೃಷ್ಟಿಗೆ ಹೆಸರುವಾಸಿಯಾಗಿದ್ದಾರೆ.
ಮೊನ್ನೆಯಷ್ಟೇ ಬಾಲಕಿಯ ಕಿಡ್ನಿ, ಲಿವರ್ ಹಾಗೂ ಹೃದಯವನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದ ಎಸಡಿಎಂ ಆಸ್ಪತ್ರೆ ವೈದ್ಯರಿಗೆ ಮತ್ತೊಂದು ಅಂತಹದೇ ಘಟನೆ ಮರುಕಳಿಸಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆ ಬದುಕುಳಿಯುವುದು ಕಷ್ಟ ಎಂದು ಅರಿತ ಕುಟುಂಬಸ್ಥರು ಅಂಗಾಗಗಳನ್ನು ದಾನ ಮಾಡಿದ್ದಾರೆ.
ಮಹಿಳೆಯ ಒಂದು ಕಿಡ್ನಿಯನ್ನು ಕೆಎಲ್ಇ ಬೆಳಗಾವಿಗೆ ಹಾಗೂ ಲಿವರ್ ಬೆಂಗಳೂರಿನ ಸ್ಪರ್ಶದ ಆಸ್ಪತ್ರೆಗೆ ಹಾಗೂ ಹೃದಯವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಜೋತೆಗೆ ಮತ್ತೊಂದು ಕಿಡ್ನಿಯನ್ನು ಎಸಡಿಎಂ ಆಸ್ಪತ್ರೆಯಲ್ಲಿ ಬೇರೆಯವರಿಗೆ ಅಳವಡಿಸುವ ಮೂಲಕ ೪ ಮಂದಿಗೆ ಜೀವದಾನ ಮಾಡಿದ್ದಾರೆ.
೦ ಟ್ರಾಫೀಕನಲ್ಲಿ ಈ ರೀತಿ ಅಂಗಾಗಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ದೃಶ್ಯಗಳು ಎಲ್ಲೇಡೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.