
ವನಮಹೋತ್ಸವ ಕಾರ್ಯಕ್ರಮ
ಧಾರವಾಡ
ಜಿಲ್ಲೆಯ ಹೊಲ್ತಿಕೊಟಿ ವ್ಯಾಪ್ತಿಯಲ್ಲಿ ಬರುವ ರಾಗಿ ಕಲ್ಲಾಪೂರ ಗ್ರಾಮದಲ್ಲಿ ಶಾಲೆ ಮಕ್ಕಳು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಧಾರವಾಡ ಉಪ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ RFO ಉಪ್ಪಾರ ನೇತೃತ್ವದಲ್ಲಿ ನಡೆದ
ಈ ಕಾರ್ಯಕ್ರಮದಲ್ಲಿ
ಗ್ರಾಮ ಪಂಚಾಯತ್ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದರ ಜೋತೆಗೆನೆ ಹೊಲ್ತಿಕೋಟೆ ಅರಣ್ಯ ವ್ಯಾಪ್ತಿಯ ಅಧಿಕಾರಿ ಕಾಂಬಳೆ ಅವರು ಕಾರ್ಯಕ್ರಮದ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡರು.

ಹಸಿರು ಕರ್ನಾಟಕ ಅಭಿಯಾನದಡಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಒಟ್ಟು 20 ಕೆಜಿ ಸಸಿ ಬೀಜಗಳನ್ನು ಈ ವನಮಹೋತ್ಸವದ ಬೀಜೋತ್ಸವದ ಕಾರ್ಯಕ್ರಮದಲ್ಲಿ ನೆಡಲಾಯಿತು.
ಹೋಲ್ತಿಕೋಟಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇದಕ್ಕೆ ಸಾಕ್ಷಿಯಾದ್ರು….