
ಮಾಜಿ ರೌಡಿ ಶಿಟರ್ ನಿಂದ ಯುವಕನ ಬರ್ಬರ್ ಕೊಲೆ!
ಕ್ಷುಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದೆ. ಇಂದು ರಾತ್ರಿ ೧೦ರ ಆಸು ಪಾಸಿನಲ್ಲಿ ನಡೆದ ಈ ಘಟನೆಯಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೊಲೆಯಾದ ದುರ್ದೈವಿಯನ್ನು ಆನಂದನಗರದ ನಿವಾಸಿ ಮೆಹಬೂಬ್ ಕಳಸದ (28) ಎಂದು ಗುರುತಿಸಲಾಗಿದೆ.ವೃತ್ತಿಯಲ್ಲಿ ಟೈಲ್ಸ್ ಕೆಲಸಗಾರನಾಗಿದ್ದ ಮೆಹಬೂಬ್ ಇಂದು ರಾತ್ರಿ ತನ್ನ ಮನೆಯ ಬಳಿ ನಿಂತಿರುವಾಗ ಈ ದುರ್ಘಟನೆ ಘಟನೆ ನಡೆದಿದೆ. ಇನ್ನೂ ಕೊಲೆ ಮಾಡಿದ ಆರೋಪಿಯು ಕೂಡ ಇದೆ ಪ್ರದೇಶದ ವನೆಂದು ಹೆಳಲಾಗಿದೆ. ಗೌಸ್ ತಹಸಿಲ್ದಾರ್ ಅಲಿಯಾಸ್ ಗೌಸ್ಯಾನೆ ಕೊಂದಿದ್ದಾನೆ ಎಂದು ಮೆಹಬೂಬನ ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ ಗೌಸ್ಯಾ ಹಿಂದಿನಿಂದಲೂ ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆಂದು ತಿಳಿದು ಬಂದಿದೆ.ಆದರೆ ಕೊಲೆಗೆ ನಿಖರ ಕಾರಣ ಪೊಲಿಸ್ ತನಿಖೆಯಿಂದಲೆ ತಿಳಿಯಬೆಕಿದೆ.ಸದ್ಯಕ್ಕೆ ಘಟನಾ ಸ್ಥಳದಿಂದ ಕಾಲ್ಕಿತ್ತಿರುವ ಆರೋಪಿ ಗೌಸ್ ಗಾಗಿ ಹಳೆಹುಬ್ಬಳ್ಳಿಯ ಪೊಲಿಸರು ಬಲೆ ಬಿಸಿದ್ದಾರೆ.
