
ಟಾಟಾ ಮಾರ್ಕೊ ಪೋಲೊ ಕಾರ್ಮಿಕರ ಪ್ರತಿಭಟನೆ
ಧಾರವಾಡ
2 ವರ್ಷದಿಂದ ವೇತನ ಪರಿಷ್ಕರಣೆ ಮಾಡದೇ ಬಾಕಿ ಉಳಿಸಿರುವ ಕಂಪನಿ ವಿರುದ್ದ ಸಿಡಿದೆದ್ದು, ಟಾಟಾ ಮಾರ್ಕೊ ಪೋಲೊ ಕಾರ್ಮಿಕರು ರಜಾದಿನವಾದ ರವಿವಾರ ಬೀದಿಗಿಳಿದು ಹೋರಾಟ ಮಾಡಿದ್ರು.

ಸಾವಿರಾರು ಕಾರ್ಮಿಕರು ಧಾರವಾಡದ ಕಲಾಭವನದಿಂದ ನೇರವಾಗಿ ಡಿಸಿ ಕಚೇರಿ ವರೆಗೂ ಆಗಮಿಸಿ, ಬೃಹತ್ ಪ್ರತಿಭಟನೆ ನಡೆಸಿದ್ರು.

ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಒತ್ತಾಯಿಸಿದ್ರು.

ಈ ಪ್ರತಿಭಟನೆಯಲ್ಲಿ
ಕಾರ್ಮಿಕರು ಮತ್ತು ಕಾರ್ಮಿಕ ಕುಟುಂಬದವರು ಪಾಲ್ಗೊಂಡಿದ್ದರು.
ಹೊಸ ವೇತನ ಒಪ್ಪಂದ ಜಾರಿ ಮಾಡಲು ಸಿಎಂ ಅವರು ಕಂಪನಿ ಜೋತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಡಬೇಕಾಗಿ ಕಾರ್ಮಿಕರು ಒತ್ತಾಯಿಸಿದ್ರು.
1 Comment
Thanku sir nema chanalge dhanevadagalu