ಸ್ಥಳೀಯ ಸುದ್ದಿ

ತಾಜ್ಯವಿಲೇವಾರಿ ಘಟಕಕ್ಕೆ ಶಿವಲೀಲಾ ಕುಲಕರ್ಣಿ ಭೇಟಿ

ಧಾರವಾಡ

ಧಾರವಾಡ ಗ್ರಾಮೀಣ ಶಾಸಕರಾದ ಶ್ರೀ ವಿನಯ ಕುಲಕರ್ಣಿಯವರ ಸೂಚನೆಯ ಮೇರೆಗೆ,ಇಂದು ಹೊಸಯಲ್ಲಾಪುರದ ಕೋಳಿಕೇರಿ,ಹಾಗೂ ಹೊಸಯಲ್ಲಾಪೂರ ರುದ್ರಭೂಮಿ ,ಹಾಗೂ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಡಾ – ಗೋಪಾಲಕೃಷ್ಣ ರವರು ತ್ಯಾಜ್ಯ ಸಂಸ್ಕರಣಾ ಘಟಕದ ಮೂಲಕ ರೈತರಿಗೆ ಅನುಕೂಲವಾಗುವಂತೆ ಗೊಬ್ಬರ ತಯಾರಿಸುತ್ತಿದ್ದು,ಸಾವಯವ ಗೊಬ್ಬರಗಳಲ್ಲಿ ಎರಡನೇಯ ಅತೀ ಉತ್ತಮ ಗೊಬ್ಬರವಾಗಿದ್ದು ರೈತರು ಅತಿ ಕಡಿಮೆ ಬೆಲೆಗೆ ಕೊಂಡೊಯ್ಯುತ್ತಿದ್ದಾರೆ,ಆದರೆ ಈಗಿರುವ ತ್ಯಾಜ್ಯ ನಿರ್ವಹಿಸಲು ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದರು.


ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ತ್ಯಾಜ್ಯ ವಸ್ತುಗಳವಿಲೇವಾರಿ,ಸಂಸ್ಕರಣೆಯ ಬಗ್ಗೆ ಕಟ್ಟು ನಿಟ್ಟಿನ ಕ್ರಮಗಳು ಜರುಗಬೇಕು,ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಸ್ಕರಣಾ ಕೇಂದ್ರದ ಮಾದರಿಯಲ್ಲಿ ಅಭಿವೃಧ್ಧಿಯಾಗಬೇಕು,ಇದಕ್ಕೆ ತಗಲುವ ವೆಚ್ಚವನ್ಬು ಮಾನ್ಯ ಶಾಸಕರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನವನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ,ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.


ಹೆಬ್ಬಳ್ಳಿ ರಸ್ತೆಯ ಹೆಬ್ಬಳ್ಳಿ ಫಾರ್ಮ, ನಾಲಾ ತಡೆಗೋಡೆ,ಹಾಗೂ ಹೊಸಯಲ್ಲಾಪುರ ನವಲೂರ ರಸ್ತೆಯ ಸಿಡಿ ನಿರ್ಮಾಣ, ಹಾಗೂ ಮದಿಹಾಳದ ಡಿಪೋ ಮುಂದಿರುವ ದಿಡ್ಡ ಗಠಾರಿಗೆ ತಡೆಗೋಡೆಯನ್ನು ಸಿಧ್ದಾರೂಡ ಕಾಲೋನಿಯಿಂದ ಸಿಧ್ಧರಾಮ ಕಾಲೋನಿಯವರೆಗೆ ನಿರ್ಮಾಣ,ಹಾಗೂ ಕಂಠಿಗಲ್ಲಿ ಯ ಗಟಾರುಗಳ ಹೂಳೆತ್ತುವಂತೆ ಸೂಚಿಸಲಾಯಿತು.


ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಆನಂದ ಜಳಕಿ ಜೋನಲ್ ಆಫೀಸರ ಮಲ್ಲಿಕಾರ್ಜುನ ಸಬರದ ಉಷಾ ಬೆಂಡಿಗೇರಿ,ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ,ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀಮತಿ ದೀಪಾ ನೀರಲಕಟ್ಟಿ,ರಾಜಶೇಖರ ಕಮತಿ,ಸೂರವ್ವ ಪಾಟೀಲ,ಮೈನು ನಧಾಪ,ಪ್ರಕಾಶ ಗಾಟಗೆ,ಅಜ್ಜಪ್ಪ ಗುಲಾಲದವರ,ಸಂಜೀವ ಲಕಮನಹಳ್ಳಿ,ಆನಂದ ಸಿಂಗನಾಥ,ಬಸವರಾಜ ಜಾಧವ,ಸಂತೋಷ ನೀರಲಕಟ್ಟಿ,ಕಿಶೋರ ಬಡಿಗೇರ,ನಿಜಾಮ ರಾಹಿ,ಶ್ರೀಶೈಲ ಭಾವಿಕಟ್ಟಿ,ಪ್ರಕಾಶ ಹುಲಮನಿ,ಈಶ್ವರ ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button