
ಧಾರವಾಡ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಅಪಘಾತದಲ್ಲಿ ಸಾವು
ಧಾರವಾಡ
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್ ನರ್ಸ ಆಗಿ ಕೆಲಸಮಾಡಿಕೊಂಡಿದ್ದ ಇಬ್ಬರು ಸಿಬ್ಬಂದಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ರಜೆ ಇದ್ದ ಕಾರಣ ತಮ್ಮದೇ ಅಂವೇಜರ್ ಬೈಕನಲ್ಲಿ ಗೋವಾಕ್ಕೆ ಹೋಗಿದ್ದರು ಇಬ್ಬರು ಸ್ನೇಹಿತರು.

ಗೋವಾ ಪ್ರವಾಸ ಮುಗಿಸಿಕೊಂಡು ವಾಪಸ್ ಬರುವಾಗ ಕಲಘಟಗಿ ಸಮೀಪದ ಕಾರವಾರ ರಸ್ತೆಯಲ್ಲಿರುವ ದೇವಿಕೊಪ್ಪ ಕ್ರಾಸ್ ಬಳಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ಹಾಗೂ ಕ್ಯಾಂಟರ್ ವಾಹನ ನಡುವೆ ನಡೆದ ಅಪಘಾತ ಇದಾಗಿದೆ.



ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳಾದ ನೂರ ಅಹ್ಮದ ಹಾಗೂ ಜಾವೇದ ಪಠಾಣ ಮೃತರಾಗಿದ್ದು, ಕಲಘಟಗಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಒತ್ತಡದ ನಡುವೆಯೂ ಎಲ್ಲರೊಂದಿಗೆ ನಗುಮೊಗದಿಂದಲೇ ಮಾತನಾಡುತ್ತಿದ್ದ ಇಬ್ಬರ ಅಗಲಿಕೆ ಸಿಬ್ಬಂದಿಗೆ ಬರಸಿಡಿಲು ಬಡದಂತೆ ಆಗಿದೆ.
ತಮ್ಮ ದೇಹದ ತೂಕ ಇಳಿಸಿಕೊಂಡು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ನೂರ ಅಹ್ಮದ ಅವರು ಇತ್ತೀಚಿಗೆ 2-3ವರ್ಷದ ಹಿಂದೆಯಷ್ಟೇ ಸಾಧನೆ ಮಾಡಿ, ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದರು.


ಇನ್ನು ಇಬ್ಬರು ಸಿಬ್ಬಂದಿಯ ಕುಟುಂಬಸ್ಥರಿಗೂ ಮಾಹಿತಿ ತಿಳಿಸಲಾಗಿದೆ.
ಜಿಲ್ಲಾಸ್ಪತ್ರೆ ಸಿಬ್ಬಂದಿ, ಆತ್ಮೀಯರು, ಹಾಗೂ ಒಡನಾಡಿಗಳಾದವರು
ಇಬ್ಬರು ಮೃತರ ಕುಟುಂಬಕ್ಕೆ
ದೇವರು ದು:ಖ ಭರಿಸುವ ಶಕ್ತಿ ಕೊಡಲೆಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
1 Comment
ನೂರ ಅಹಮ್ಮದ್ ಯಾವಾಗಲೂ ಹಸನ್ಮುಕಿಯಾಗಿದ್ದರು ಜಿಲ್ಲಾಸ್ಪತ್ರೆಯಲ್ಲಿ ಯಾರಿಗಾದರೂ ರೊಗಿಗಳಿಗೆ ಸಮಸ್ಯೆ ಇದ್ದರೆ ನೂರ್ ಹತ್ರ ಕೆಳಿದರೆ ಸಾಕು ಸಂಬಂದ ಪಟ್ಟ ವೈದ್ಯರ ಬಳಿ ಹೊಗಿ ಇವರು ನಮಗೆ ತುಂಬಾ ಆತ್ಮೀಯರು ಇವರಿಗೆ ವೈದ್ಯಕೀಯ ಸಹಾಯದ ಅವಶ್ಯಕತೆ ಇದೆ ಸಹಾಯ ಮಾಡಿ ಅಂತಾ ಹೇಳುತ್ತಿದ್ದರು.ಹೀಗೆ ತುಂಬಾ ಜನರಿಗೆ ಸಹಾಯ ಮಾಡಿದ್ದಾರೆ.ತುಂಬಾ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ನೂರ್ ಹಾಗೂ ಇನ್ನೊಬ್ಬ ಸಹೋದ್ಯೋಗಿ ಪಠಾಣ್ ಸಹೋದರನಿಗೂ ಆ ದೇವರು ಚಿರಶಾಂತಿಯನ್ನು ದಯಪಾಲಿಸಲಿ ಓಂಶಾಂತಿ