
ಬಲಿ ಪಡೆಯಲು ಕಾದಿದೆ BRTS ರಸ್ತೆಯ ಈ ತಗ್ಗು!
ಹುಬ್ಬಳ್ಳಿ
ಅವಳಿ ನಗರದ ಬಿ ಆರ್ ಟಿ ಎಸ್ ರಸ್ತೆಯಲ್ಲಿರುವ ಆ ಒಂದು ತಗ್ಗು ಬೈಕ್ ಸವಾರರನ್ನು ಮಗ್ಗಲು ಬಿಳಿಸಿ ಕೆ.. ಕೆ.. ಹಾಕಿ ನಗುತ್ತಿದೆ.
ಹೌದು ಭೈರಿದೇವರಕೊಪ್ಪದ ಸನಾ ಕಾಲೇಜು ಎದುರಿನ ಸ್ಥಿತಿ ಇದು.
ಹುಬ್ಬಳ್ಳಿಯಿಂದ ಕೆಲಸ ಮುಗಿಸಿ ಧಾರವಾಡದತ್ತ ಮುಖಮಾಡಿ ಹೊರಡುವ ಬೈಕ್,ಸವಾರರನ್ನ ಮೋಸಕ್ಕೀಡು ಮಾಡುತ್ತಿದೆ ಈ ತಗ್ಗು.

ಕಬ್ಬಿಣದ ಪಟ್ಟಿ ಹೊರ ಬಂದಿವೆ. ಅಚಾನಕ್ಕಾಗಿ ಈ ತಗ್ಗಿಗೆ ಸಿಲುಕಿ ಬಿದ್ದ ಹಲವರ ಹಲ್ಲು, ಕೈ ಕಾಲುಗಳನ್ನು ಡ್ಯಾಮೆಜ್ ಮಾಡುತ್ತಿದೆ.
ರಸ್ತೆಗೆ ಸಂಬಂಧ ಪಟ್ಟ ಅಧಿಕಾರಿಗಳು ಸಹ ಇಲ್ಲಿ ಸಂಚರಿಸಿದರೂ ಸಹ, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಇದರಿಂದ ದಿನವಿಡಿ ಶ್ರಪಿಸುವ ದ್ವಿಚಕ್ರ ವಾಹನ ಸವಾರರು, ಇದನ್ನ ಸರಿ ಪಡಿಸಬೆಕಿದ್ದ ಜನಪ್ರತಿನಿಧಿಗಳು ಸಹ ಇಲ್ಲದಂತಾದೆ. ಅವಳಿನಗರದ ಜನಸಾಮಾನ್ಯರ ಪ್ರಶ್ನೇ ತಗ್ಗು ಮುಕ್ತ ಹುಬ್ಬಳ್ಳಿ ಯಾವಾಗ ?
