
ಪಾಲಿಕೆ ಅಧಿಕಾರಿಗಳ ಬೆಸ್ಟ ಐಡಿಯಾ- ಸಾರ್ವಜನಿಕರಿಂದ ಉತ್ತಮ ಸ್ಪಂದನೆ
ಧಾರವಾಡ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 3 ರ ವಾರ್ಡ್ 3 ರ ವ್ಯಾಪ್ತಿಯ ಮಹಾಂತೇಶ ನಗರದಲ್ಲಿ ಪಾಲಿಕೆ ಅಧಿಕಾರಿಗಳ ಐಡಿಯಾ ಸುಪರ್ ಆಗಿ ವರ್ಕೌಟ್ ಆಗಿದೆ.

ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುವ ಸ್ಥಳವನ್ನು ಬಂಬೂ ಮತ್ತು ಜಾಗೃತಿ ಫಲಕಗಳನ್ನು ಅಳವಡಿಸುವುದರೊಂದಿಗೆ ಹಾಗೂ ಸ್ವಚ್ಚ ಭಾರತದ ಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಲಾಯಿತು.

ಪಾಲಿಕೆ ಸಹಾಯಕ ಆಯುಕ್ತರರಾದ ಶ್ರೀ ಆರ್ ಎಮ್ ಕುಲಕರ್ಣಿ, ಪರಿಸರ ಅಭಿಯಂತರರಾದ್ ಶ್ರೀ ನವೀನ್ ಎಮ್ ಏನ್ ಹಾಗೂ ವಾರ್ಡ್ ನ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಪದ್ಮಾವತಿ ತುಂಬಗಿ ಮೇಲ್ವಿಚಾರಕ ರಾದ ಭೀಮರಾಜ್ ಸಗಬಾಲ ನೇತೃತ್ವದಲ್ಲಿ ವಿನೂತನ ಮಾದರಿಯಲ್ಲಿ ಕಸ ಚೆಲ್ಲುವುದನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಈ ರೀತಿಯಾಗಿ ವಿಭಿನ್ನ ಪ್ರಯತ್ನ ಮಾಡಲಾಯಿತು.

ಮುಧೋಳಕರ ಕಾಂಪೌಂಡ್ , ಜೋಶಿ ಫಾರ್ಮನಲ್ಲಿ ಇದೇ ರೀತಿ ಮಾಡಲಾಗಿದ್ದು ಇಲ್ಲಿ ಪ್ರಸ್ತುತ ಯಾವುದೇ ಕಸ ಬೀಳದೇ ಇದ್ದುದ್ದರಿಂದ ಇದೇ ಮಾದರಿಯನ್ನು ಮಹಾಂತೇಶ ನಗರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ಇಂತಹ
ಕಾರ್ಯಗಳಿಗೆ ಸಹಕರಿಸಿದ್ದೆ ಆದರೆ ಮುಂಬರುವ ದಿನಗಳಲ್ಲಿ ಸ್ವಚ್ಚ ಸರ್ವೆಕ್ಷಣ ದಲ್ಲಿ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆ ಇನ್ನು ಹೆಚ್ಚಿನ ಸ್ಥಾನದಲ್ಲಿ ಕಂಗೊಳಿಸಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲಾ.
1 Comment
Really Innovative work done by HDMC.. Keep it up