
ಈಜಿಪ್ತಗೆ ಹೋಗುತ್ತಿರುವ ಖುಷಿ ಟಿಕಾರೆಗೆ ಆಲ್ ದಿ.ಬೆಸ್ಟ್…
ಧಾರವಾಡ
ಧಾರವಾಡದ ಹೆಮ್ಮೆಯ ಹುಡುಗಿ, ಭಾರತದ ಕೀರ್ತಿಯನ್ನು ಈಜಿಪ್ತ್ ದೇಶದಲ್ಲಿ ಬೆಳಗಿಸಲು ಹೊರಟಿರುವ ಖುಷಿ ನಮಗೆಲ್ಲರಿಗೂ ಖುಷಿ ತರಲಿ ಎಂದು ಅವರ ಕುಟುಂಬ ಹಾಗೂ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಡಿಸೆಂಬರ್ 10 ರಿಂದ ಡಿಸೆಂಬರ್ 21 ರವರೆಗೆ ಈಜಿಪ್ತ್ ದೇಶದ ಲಕ್ಸರ್ ಪಟ್ಟಣದಲ್ಲಿ ಮಿಸ್ ಇಕೋಟಿನ್ ಇಂಟರನ್ಯಾಶನಲ್ ಇಂಡಿಯಾ 2021 ಬ್ಯೂಟಿ ಸ್ಪರ್ಧೆ ನಡೆಯಲಿದೆ.


ಏಕನಾಥ ನಾಜರೆ ಹಾಗೂ ಶೈಲಾ ದಂಪತಿಯ ಮಗಳು ಖುಷಿ ಟಿಕಾರೆ ಪವರ್ ಸಿಟಿ ನ್ಯೂಸ್ ಜೋತೆಗೆ ಮಾತನಾಡಿದ್ದು, ಖಂಡಿತವಾಗಿಯೂ ನಾನು ಗೆದ್ದು ಭಾರತದ ಕೀರ್ತಿಯನ್ನು ಬೆಳಗಿಸುತ್ತೇನೆ ಎನ್ನುವ ಆತ್ಮವಿಶ್ವಾಸದಲ್ಲಿ ಈಜಿಪ್ತಗೆ ಪ್ರಯಾಣ ಬೆಳೆಸುತ್ತಿದ್ದಾಳೆ.


ಇವಳ ದೊಡ್ಡಮನನ್ನು ನೆನೆಯುತ್ತಾ ಮಾತನಾಡಿರುವ ಖುಷಿ, ನನಗೆ ಬೆಂಬಲವಾಗಿ ನಿಂತಿರುವ ಕುಟುಂವ ಸ್ನೇಹಿತರಿಗೆ ಹಾಗೂ ಕಾಲೇಜು ಆಡಳಿತ ಮಂಡಳಿಗೂ ದೊಡ್ಡ ಥ್ಯಾಕ್ಸ ಹೇಳಿದ್ದಾರೆ.

ಖುಷಿ ಅವಳನ್ನು ಅವರ ಆತ್ಮೀಯರು ಅತ್ಯಂತ ಸಂತೋಷದಿಂದ ವಿದೇಶಕ್ಕೆ ಹೋಗಲು ಬಿಳ್ಕೊಡುತ್ತಿದ್ದಾರೆ.
ಖುಷಿ ಅವರ ಅತ್ತೆ, ಮಾವ , ತಂದೆ – ತಾಯಿ ಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಧಾರವಾಡ ಜಿಲ್ಲೆಯ ಪ್ರಜ್ಞಾವಂತರು ಕೂಡ ಖುಷಿ ಗೆದ್ದು ಬರಲಿ ಎಂದು ಆಶಿಸುತ್ತಿದ್ದಾರೆ. ಪವರ್ ಸಿಟಿನ್ಯೂಸ್ ತಂಡವೂ ಕೂಡ ಖುಷಿ ಗೆದ್ದು ಬರಲೆಂದು ಅಭಿನಂದನೆ ಸಲ್ಲಿಸುತ್ತಿದೆ.
1 Comment
All The Best Kushi Tikare