ಅಮೀತ ಶಾ ಸದ್ಗುರು ಸಿದ್ಧಾರೂಢರ ಜೀವನಾಧಾರಿತ ಪುಸ್ತಕ ಉಡುಗೋರೆ ಕೊಟ್ಟ ಮೇಯರ್ ಅಂಚಟಗೇರಿ


ಎಸ್ ಡಿ ಎಂ ಕೋವಿಡ್ ಎಲ್ಲಾ ಪ್ರಕರಣಗಳ ಜಿನೋಮ್ ಸಿಕ್ವೆನ್ಸಿಂಗ್ ವರದಿ ಲಭ್ಯ ಯಾವುದೇ ಹೊಸ ಪ್ರಬೇಧದ ವೈರಾಣು ಇಲ್ಲ
ಧಾರವಾಡ
ಇಲ್ಲಿನ ಸತ್ತೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ ಡಿ ಎಂ) ವೈದ್ಯಕೀಯ ಕಾಲೇಜಿನಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಬಾಕಿ ಇದ್ದ 140 ಜಿನೋಮ್ ಸಿಕ್ವೆನ್ಸಿಂಗ್ ವರದಿಗಳು ಲಭ್ಯವಾಗಿದ್ದು.ಯಾವುದೇ ಹೊಸ ಪ್ರಬೇಧದ ವೈರಾಣು ಇಲ್ಲ. ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದ್ದಾರೆ.
ಎಸ್ ಡಿ ಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ ಕೋವಿಡ್ ಪ್ರಕರಣಗಳ , ಪ್ರಯೋಗಾಲಯ ಸ್ಯಾಂಪಲ್ಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಪತ್ತೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ನಿನ್ನೆ 113 ವರದಿಗಳ ಮಾಹಿತಿ ಸಿಕ್ಕಿತ್ತು. ಬಾಕಿ ಇದ್ದ 140 ವರದಿಗಳು ಇಂದು ದೊರೆತಿದ್ದು , ಇವುಗಳಲ್ಲಿ ಯಾವುದೇ ಹೊಸ ತಳಿಯ ವೈರಾಣು ಇಲ್ಲ ಎಂಬುದು ದೃಢಪಟ್ಟಿದೆ.
ಜಿಲ್ಲೆಯ ಜನತೆ ಆತಂಕಕ್ಕೆ ಈಡಾಗುವ ಅಗತ್ಯವಿಲ್ಲ, ಆದರೆ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರದೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.ಕೋವಿಡ್ ನಿರೋಧಕ ಎರಡೂ ಡೋಸ್ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.