ಧಾರವಾಡ

ಶಾಸಕ ಅಮೃತ ದೇಸಾಯಿ ಕುಟುಂಬದಿಂದ ಉಳವಿಗೆ ಪಾದಯಾತ್ರೆ


ಧಾರವಾಡ

ಪ್ರತಿವರ್ಷದಂತೆ ಈ ವರ್ಷವು ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಗುರುವಾರ ಪಾದಯಾತ್ರೆ ಆರಂಭಿಸಿದರು.


ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಟದಿಂದ ಆರಂಭವಾದ ಪಾದಯಾತ್ರೆಗೆ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಜಿ, ಗರಗದ ಶ್ರೀ ಮಡಿವಾಳೇಶ್ವರ ಕಲ್ಮಟದ ಚನ್ನಬಸವ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮಿಗಳು ಚಾಲನೆ ನೀಡಿದರು.
ನಂತರ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕರು ಹಾಗೂ ಅಮೃತ ದೇಸಾಯಿಯವರ ತಂದೆಯವರಾರ ಎ.ಬಿ.ದೇಸಾಯಿ, ಪತ್ನಿ ಪ್ರೀಯಾ ದೇಸಾಯಿ, ಅಶೋಕ ದೇಸಾಯಿಯವರು ಪಾದಯಾತ್ರೆಗೆ ಹೆಜ್ಜೆ ಹಾಕಿದರು. ದೇಸಾಯಿ ಕುಟುಂಬದ ಈ ಪಾದಯಾತ್ರೆಯಲ್ಲಿ ಧಾರವಾಡ ಗ್ರಾಮೀಣ ಹಾಗೂ ಧಾರವಾಡ ಶಹರ ಸೇರಿದಂತೆ ಸಾವಿರಾರು ಜನ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡರು. ಈ ವೇಳೆ ಉಳವಿ ಚನ್ನಬಸವೇಶ್ವರ ಹಾಗೂ ಗರಗ ಮಡಿವಾಳೇಶ್ಚರ ದೇವರ ಪರ ಜಯಘೋಷಗಳು ಪಾದಯಾತ್ರೆಯಲ್ಲಿ ಕೇಳಿ ಬಂದವು.


ಅದಕ್ಕೂ ಮುನ್ನ ಎಲ್ಲ ಮಠಾಧೀಶರನ್ನು ಸನ್ಮಾನಿಸಲಾಯಿತು. ದೇಸಾಯಿ ಕುಟುಂಬದವರು ಶ್ರೀಗಳ ಆಶೀರ್ವಾದ ಪಡೆದರು.
ಗುರುವಾರ ಮಧ್ಯಾಹ್ನ ಧಾರವಾಡದ ತಪೋವನದಲ್ಲಿ ಪ್ರಸಾದ ಮಾಡಿದ ನಂತರ, ಸಂಜೆ ನಿಗದಿ ಗ್ರಾಮದಲ್ಲಿ ವಾಸ್ತವ್ಯವನ್ನು ಮಾಡಿ ನಾಳೆ ಮತ್ತೆ ಪಾದಯಾತ್ರೆ ಮುಂದುವರೆಯಲಿದೆ ಎಂದು ಅಶೋಕ ದೇಸಾಯಿಯವರು ಮಾಹಿತಿ ನೀಡಿದರು.


…………………….

ಗರಗದ ಗುರು ಮಡಿವಾಳೇಶ್ಚರ ಶ್ರೀಗಳ ಇಚ್ಛೆಯಂತೆ ಹಾಗೂ ರಾಜ್ಯರೈತರು, ಧಾರವಾಡ ಗ್ರಾಮೀಣ ಕ್ಷೇತ್ರದ ಜನತೆಯ ಕಲ್ಯಾಣಕ್ಕಾಗಿ ಶಾಸಕ ಅಮೃತ ದೇಸಾಯಿಯವರ ಕೈಗೊಂಡಿರುವ ಪಾದಯಾತ್ರೆ ಕಾರ್ಯಕ್ಕೆ ಎಲ್ಲ ಮಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದರು. ಪಾದಯಾತ್ರೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಈ ವೇಳೆ ಎಲ್ಲ ಶ್ರೀಗಳನ್ನು ಶಾಸಕ ಅಮೃತ ದೇಸಾಯಿಯವರ ಕುಟುಂಬ ಸದಸ್ಯರು ಸನ್ಮಾನಿಸಿದರು.

Related Articles

Leave a Reply

Your email address will not be published. Required fields are marked *

Back to top button