ಸ್ಥಳೀಯ ಸುದ್ದಿ

ಧಾರವಾಡ 71 ಕ್ಕೆ ನಡೆಯಲಿದೆ ಜಿದ್ದಾ ಜಿದ್ದಿನ ರಾಜಕೀಯ

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಮತ್ತೊಂದು ಬಾರಿಗೆ ಚುನಾವಣೆಗೆ‌ ನಿಲ್ಲೊದು ಕನಫರಂ ಆಗಿದೆ.

ಈಗಾಗಲೇ ಜಿಲ್ಲೆಯಿಂದ ಹೊರಗಡೆ ಇದ್ದುಕೊಂಡೇ ಚುನಾವಣೆ ಎದುರಿಸಿ ಗೆದ್ದು ತೋರಿಸುವ ಪ್ಲ್ಯಾನ್ ಮಾಡಿದ್ದಾರೆ ಮಾಜಿ ಸಚಿವರು.

ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯಾ ಬೂತ್ ಗೆಲ್ಲುವ ಅಭಿಯಾನವನ್ನು ಧಾರವಾಡ ಜಿಲ್ಲೆಯ ಕ್ಷೇತ್ರದಲ್ಲಿ ವಿಡಿಯೋ ಕಾನ್ಪರೇನ್ಸ ಮೂಲಕ ಮಾಡಿ ಬೂತ್ ಮಟ್ಟದ ಕಾರ್ಯಕರರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲೆ ಅವರು ವಿನಯ‌ ಕುಲಕರ್ಣಿ ಅವರ ಹೆಗಲ‌ ಮೇಲೆ ಕೈ ಹಾಕಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ನೋಡಿದ್ರೆ, ಯಾವತ್ತಿಗೂ ಕೈ ಪಕ್ಷ ನಿಮ್ಮ ಜೋತೆಗೆ ಇರುತ್ತದೆ ಎನ್ನುವುದನ್ನು ಸಾಬೀತು ಮಾಡಿದಂತೆ‌ ಆಗಿದೆ.‌

ಇದಕ್ಕೆ ಪುಷ್ಪಿ ನೀಡುವಂತೆ ರಾಜ್ಯದ ಕೈ ಪಕ್ಷದ ಹಿರಿಯ ನಾಯಕರು ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಇವರ ನಾಯಕತ್ವಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ವಿನಯ ಕುಲಕರ್ಣಿ ಅವರು ಧಾರವಾಡ ಗ್ರಾಮೀಣಕ್ಕೆ ಚುನಾವಣೆಗೆ ನಿಂತರೆ‌, ಬಿಜೆಪಿ‌ ಅಭ್ಯರ್ಥಿಗೆ ಟಫ ಫೈಟ್ ಕೊಡುವುದರಲ್ಲಿ ಯಾವುದೇ ಸಂದೇಹವೇ ಇಲ್ಲಾ.

ಇತ್ತ ಬಿಜೆಪಿಯಿಂದ ಹಾಲಿ‌ ಶಾಸಕ ಅಮೃತ ದೇಸಾಯಿ ಅವರಿಗೆ ಟಿಕೇಟ್ ಕೊಡುವುದು ಪಕ್ಕಾ ಆಗಿದೆ.

ಒಂದು ವೇಳೆ ಅಮೃತ ದೇಸಾಯಿ ಅವರಿಗೆ ಟಿಕೆಟ್ ಕೊಟ್ಟರೆ, ಜನಜಾಗೃತಿ ಸಂಘದ ಸಂಸ್ಥಾಪಕ ಬಸವರಾಜ ಕೊರವರ್ ಪಕ್ಷೇತರನಾಗಿ ನಿಲ್ಲುವ ವಿಶ್ವಾಸವಿದೆ.

ಇನ್ನು ಕಾಂಗ್ರೆಸನಿಂದ ಧಾರವಾಡ ಗ್ರಾಮೀಣಕ್ಕೆ ನಿಲ್ಲೊದಾಗಿ ಅರ್ಜಿ ಹಾಕಿರುವ ಇಸ್ಮಾಯಿಲ್ ತಮಟಗಾರ ಕೂಡ ಪಕ್ಷದ ನಾಯಕರೊಂದಿಗೆ ಮಾತನಾಡಲಿದ್ದಾರೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಮಿ ಅವರ ಜೋತೆಗೆ ಸಧ್ಯದ ಗ್ರಾಮೀಣ ಕ್ಷೇತ್ರದ ಬಗ್ಗೆ ಮಾತನಾಡಿರುವ ಮಾಜಿ ಶಾಸಕಿ‌ ಸೀಮಾ ಮಸೂತಿ ಪಕ್ಷದಿಂದ ಟಿಕೆಟ್ ತಮಗೆ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರು,

ಬಿಜೆಪಿ ಮುಖಂಡರೂ ಆಗಿರುವ ತವನಪ್ಪ‌ ಅಷ್ಟಗಿ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ನಾನು ಕೂಡ ಅರ್ಹ‌ತೆ ಹೊಂದಿರುವ ವ್ಯಕ್ತಿ. ನನಗೂ ಟಿಕೇಟ್ ಕೊಡಿ ಎಂದು ಪಟ್ಟು ಹಿಡಿದಿದ್ದು, ಒಂದು‌ವೇಳೆ ಅಮೃತ‌ದೇಸಾಯಿ‌ ಅವರಿಗೆ ಟಿಕೇಟ್ ಕೊಟ್ಟರೆ ಅಸಮಾಧಾನ ಆಗುವ ಸಾಧ್ಯತೆಯು ಇದೆ.

Related Articles

Leave a Reply

Your email address will not be published. Required fields are marked *

Back to top button