BREAKING NEWSHubballiPoliceTWINCITYರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪತ್ರಕರ್ತ ದಾವೂದ್ ಶೆಖ್‌ಗೆ ಅವಳಿನಗರದ ಪೊಲೀಸ್ ಆಯುಕ್ತರಿಂದ ಮೆಚ್ಚುಗೆ!

RAJA DAKHANI

POWER CITYNEWS| HUBLI : ಹುಬ್ಬಳ್ಳಿ: ಅವಳಿನಗರದಲ್ಲಿ ಇತ್ತೀಚೆಗಷ್ಟೇ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಳು ಯಾವ್ದೆ ಅಹಿತಕರ ಘಟನೆಗೆ ಸಾಕ್ಷಿಯಾಗದೆ ಸರಳ ಹಾಗೂ ಶಾಂತಿ ಸೌಹಾರ್ದಯುತವಾಗಿ ಆಚರಿಸಿದ್ದು ಕಾನುನೂ ಸುವ್ಯವಸ್ಥೆ ಹತೋಟಿಗೆ ಬಂದಿದೆ ಎನ್ನುವುದರಲ್ಲಿ ಸಂಶಯವೆ ಬೇಡ.

ಆದರೆ ಹುಬ್ಬಳ್ಳಿಯ ಯುವ ಪತ್ರಕರ್ತರೊರ್ವರು ಹರಿಬಿಟ್ಟ ವಿಡಿಯೋ ಒಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ 6.ಮಿಲಿಯನ್‌ಗೂ ಹೆಚ್ಚಿನ ಜನ ವಿಕ್ಷಿಸಿ ಸೈ ಎಂದಿದ್ದಾರೆ. ಆ ಮೂಲಕ ಅವಳಿನಗರದ ಪೊಲೀಸ್ ಆಯುಕ್ತರಿಂದ ಸನ್ಮಾನಿಸಲ್ಪಟ್ಟ ಸಂಧರ್ಭವೂ ನಡೆದಿದೆ.

ಅವಳಿನಗರದ ಹೆಸರಾಂತ “ಹುಬ್ಬಳ್ಳಿ ಟೈಮ್ಸ್” ಎಂಬ ವೆಬ್ ಪೋರ್ಟಲ್ ನಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ನಡೆದ ಅಪರೂಪದ ಸಂಧರ್ಭವನ್ನು ವೆಬ್ ಪೊರ್ಟ್‌ಲ್ ಮೂಲಕ ಪ್ರಕಟಿಸಿತ್ತು. ಇ ಬಾರಿ ಒಟ್ಟಾಗಿ ಆಚರಿಸಿದ ಎರಡು ಸಮಾಜದ ಜನ ಪರ್ಯಾಯ ಧರ್ಮಗಳನ್ನ ಗೌರವಿಸಿದ ಕ್ಷಣಗಳು ಮನಸೂರೆಗೊಂಡಿತ್ತು.

ಹುಬ್ಬಳ್ಳಿಯ ಮುಸ್ಲೀಂ ಪ್ರದೇಶದಲ್ಲಿ ಬಂದ ಗಣಪತಿ ಮೆರವಣಿಗೆ ದರ್ಗಾ ಬಳಿ ಬರುತ್ತಿದ್ದಂತೆ ಕೆಲಹೊತ್ತು ಅಲ್ಲೆ ನಿಂತು “ಭರ್ದೋ ಝೋಲಿ” ಖವ್ವಾಲಿ ಹಾಡಿಗೆ ರಸ್ತೆ ಪಕ್ಕದಲ್ಲಿ ನಿಂತ ಮುಸ್ಲಿಮ್ ಯುವಕರನ್ನ ಮೆರವಣಿಗೆಯತ್ತ ಸೆಳೆಯಿತು. ಆಕ್ಷಣ ಸೌಹಾರ್ದತೆಯ ಹಿಂದೂ ಮುಸ್ಲೀಂ,ಭ್ರಾತತ್ವಕ್ಕೆ ಸಾಕ್ಷಿಯಾಯ್ತು. ನಂತರದಲ್ಲಿ ಮುಸ್ಲೀಂ ಯುವಕರಿಂದ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಸಾರ್ವಜನಿಕ ಗಣೇಶನ ಪೆಂಡಾಲ್ ಬಳಿ ಬರುತ್ತಿದ್ದಂತೆ ಗಣಪತಿ ಭಜನಾ ಪದ ಹಾಕಿ ಅಚ್ಚರಿ ಮೂಡಿಸಿದರು.

ಇವೆರಡೂ ವಿಡಿಯೋಗಳನ್ನು ಒಂದಾಗಿಸಿ ಅವಳಿನಗರದ ಹಿಂದೂ ಮುಸ್ಲೀಂ ಸೌಹಾರ್ದೆತೆಯ ಹಬ್ಬಗಳನ್ನು” ಹುಬ್ಬಳ್ಳಿ ಟೈಮ್ಸ್ ” ವೆಬ್‌ಪೊರ್ಟಲ್ ಮೂಲಕ ಪತ್ರಕರ್ತ ದಾವೂದ್ ಸುದ್ದಿ ಪ್ರಕಟಿಸಿದ್ದರು. ಇದನ್ನ ಸ್ವಾಗತಿಸಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಭರ್ಪೂರ 6.ಮಿಲಿಯನ್‌ಗೂ ಹೆಚ್ಚಿನ ನೆಟ್ಟಿಗರ ಮನಗೆದ್ದ ಸುದ್ದಿ ಇದಾಗಿತ್ತು.

ಇದನ್ನ ಗುರಿತಿಸಿದ ಅವಳಿನಗರದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಅತ್ಯವಶ್ಯಕ ಇಂತಹ ಸುವಿಚಾರಗಳನ್ನು ಪೊಲೀಸ್ ಇಲಾಖೆ ಕೂಡ ಶ್ಲಾಘಿಸುತ್ತದೆ. ಎನ್ನುವುದನ್ನ ಪತ್ರಕರ್ತ ದಾವೂದ್ ಅವರನ್ನು ಆಯುಕ್ತರ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ.

ಎಂ ಎ ಸ್ನಾತಕೋತ್ತರ ಪದವಿ ಮುಗಸಿರುವ ದಾವೂದ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ದಿನಪತ್ರಿಕೆ ಹಾಗೂ ವಾರ್ತಾಭಾರತಿ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿವಹಿಸಿದ್ದ ಅವರು ಸ್ಥಳೀಯ ಸುದ್ದಿಗಳಿಗಾಗಿ “ಹುಬ್ಬಳ್ಳಿ ಟೈಮ್ಸ್” ವೆಬ್‌ಪೊರ್ಟಲ್ ಕೂಡ ನಡೆಸುತ್ತಿದ್ದಾರೆ.

ಸುದ್ದಿ ಕ್ಷಣ ಕ್ಷಣಕ್ಕೊಂದು ಬರುತ್ತಿದ್ದರು ಅವುಗಳಲ್ಲಿ ಸಮಾಜದ ಶಾಂತಿ ಸೌಹಾರ್ದತೆಯ ಸಂದೇಶ ಸಾರುವ ಕೆಲವು ಮಾತ್ರ ಓದುಗ ಜನರ ಮನ ಮುಟ್ಟುತ್ತವೆ. ಇನ್ನೂ ಇಂತಹ ವಿಷಯಗಳಲ್ಲಿ ಹುಳುಕು ಹುಡುಕಲು ತಡಕಾಡುವ ವಿಕೃತ ಮನಸ್ಸುಗಳು. ವ್ಯಕ್ತಿ,ವ್ಯಕ್ತಿತ್ವ ಹಾಗೂ ಅವುಗಳ ಗುರಿಯನ್ನು ಎತ್ತಿ ತೊರಿಸುತ್ತದೆ ಅಲ್ವಾ.

Related Articles

Leave a Reply

Your email address will not be published. Required fields are marked *