POWER CITYNEWS : HUBLI
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಗಾಂಜಾ ಘಾಟು ಜೋರಾಗಿದೆ. ಗಾಂಜಾ ಪ್ರಕರಣ ಮಟ್ಟ ಹಾಕಲು ಪೊಲೀಸ್ ಕಮೀಷನರೇಟ್ ದಿಟ್ಟ ನಿರ್ಧಾರ ಮಾಡಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಕಮರಿಪೇಟ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನೀಲ್ ಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು ಖಾಕಿ ಟೀಮ್ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಸುಮಾರು 232 ಗ್ರಾಂ. ಗಾಂಜಾ ಹಾಗೂ 1000. ರೂಪಾಯಿ ನಗದು, ಎರಡು ಮೊಬೈಲ್ ಸೇರಿ ಒಟ್ಟು 6700 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ ಪಡೆದಿದ್ದಾರೆ.
ಕಮರಿಪೇಟ ಮುಖ್ಯ ರಸ್ತೆಯಿಂದ ಮೂರು ಸಾವಿರಮಠಕ್ಕೆ ಹೋಗುವ ಮಾರ್ಗದಲ್ಲಿ ಜನನಿಬೀಡ ಪ್ರದೇಶದಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹುಬ್ಬಳ್ಳಿ ಕಮರಿಪೇಟ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂದಿತ ಅರೋಪಿ ಗಳಾದ ೧)ಇರ್ಫಾನ ಮಹ್ಮದಸಲಿಂ ಬಾರೂದವಾಲೆ, ೨)ಆಶೀಫ್ ರಫೀಕ ಬಿಜಾಪೂರ,೩) ಸಲ್ಮಾನ ಬಾಬರ ತೇಕಬರಾನ್,೪)ಆಸ್ಪಾಕ ರಿಯಾಜಅಹೃದ ಫೀರಜಾದೆ ಎಂಬುವವರೆ ಬಂಧಿತ ಆರೋಪಿಗಳಾಗಿದ್ದು, ಪಿಎಸ್ಐ ಸುನೀಲ್ ಎಂ ಆ್ಯಂಡ್ ಟೀಮ್ ಕಾರ್ಯಕ್ಕೆ ಅವಳಿನಗರದ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.