ಲಿಂಗಾಯತ ಸಮುದಾಯ ಕಡೆಗಣನೆ : ಮೋಹನ ಲಿಂಬಿಕಾಯಿ ಅಸಮಾಧಾನ!
MOHAN LIMBIKAI
POWER CITYNEWS : HUBBALLI
ಹುಬ್ಬಳ್ಳಿ : ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಧಾರವಾಡ ಜಿಲ್ಲಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದ ಮೋಹನ ಲಿಂಬಿಕಾಯಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ.ಮಾತನಾಡಿದ ಅವರು ಧಾರವಾಡ ಭಾಗಕ್ಕೆ ಲಿಂಗಾಯತರಿಗೆ ಪ್ರತಿಸಲ ಅನ್ಯಾಯ ವಾಗುತ್ತಿದೆ. ಎಂದು ಆರೋಪಿಸಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಪತ್ರಿಕಾ ಸುದ್ದಿಗೋಷ್ಠಿ ಕುರಿತು ಮಾತನಾಡಿದ ಅವರು ಪ್ರತಿ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳು ಲಿಂಗಾಯತರನ್ನ ಕಡೆಗೆಣಿಸುತ್ತಿವೆ. ಇಂತಹದೆ ಪರಿಸ್ಥಿತಿ ಇದೀಗ ಮತ್ತೋಮ್ಮೆ ಧಾರವಾಡ ಭಾಗದ ಲಿಂಗಾಯತ ನಾಯಕರಿಗೆ ಅವಕಾಶ ಕಲ್ಪಿಸದೆ ಕಾಂಗ್ರೆಸ್ ಪಕ್ಷ ಕೂಡ ಅದೆ ರೂಢಿ ಮುಂದುವರೆಸಿದೆ.ಆದರೆ ಧಾರವಾಢ ಜಿಲ್ಲಾ ವ್ಯಾಪ್ತಿಯಲ್ಲಿ ಲಿಂಗಾಯತರ ಮತಗಳೆ ಹೆಚ್ಚಿರುವುದನ್ನ ಪಕ್ಷ ಮರೆತಂತಿದೆ.
ಆದರೆ ಇ ಬಾರಿ ನಡೆಯುವ ಲೋಕಸಭಾ ಚುನಾವಣೆಗೆ ಪಕ್ಷ ಲಿಂಗಾಯತರನ್ನ ಕಡೆಗಣಿಸುವ ಮೂಲಕ ಮತ್ತೋಮ್ಮೆ ಹತಾಶೆಗೊಳಿಸಿದ್ದು ಕೂಡ ನಿಜ,ಇನ್ನೂ ಲಿಂಗಾಯತ ನಾಯಕರ ಪೈಕಿ ಲೋಕಸಭಾ ಚುನಾವಣಾ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದ ನನಗೂ ನಿರಾಸೆ ಮೂಡಿಸಿದೆ. ಆದರೂ ಸಹ ಪಕ್ಷ ನೀಡುವ ಜವಾಬ್ದಾರಿಗೆ ಬದ್ಧನಾಗಿರುತ್ತೇನೆಂದು ಹೇಳುವ ಮೂಲಕ ಕಾಂಗ್ರೆಸ್ ನಲ್ಲಿ ಮತ್ತೊಮ್ಮೆ ಗುಂಪುಗಾರಿಕೆ ನಡೆಯುತ್ತಿರುವುದನ್ನು ಪರೋಕ್ಷವಾಗಿ ಭಿನ್ನಾಭಿಪ್ರಾಯದ ಮೂಲಕ ಹೊರಹಾಕಿದ್ದು ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷವೆ ಸುಗಮದಾರಿ ಮಾಡಿಕೊಟ್ಟಂತಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಶಾಸಕ ಎಸೈ ಚಿಕ್ಕನಗೌಡರ ಸೇರಿದಂತೆ ಕೆಲವು ಲಿಂಗಾಯತ ಮುಖಂಡುರುಗಳಿದ್ದರು.