ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ:ರಿತ್ವಿಕ್ ಸುಬ್ರಹ್ಮಣ್ಯ!
dakhani

POWER CITY NEWS : HUBBALLI/ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳನ್ನು ಒದಗಿಸುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ಸಿಗ್ನಾದಿಂದ ಜಾಬ್ ಫೇರ್ ‘ನ್ನು ಮಾ.9 ರಂದು ಇಲ್ಲಿನ ವಿದ್ಯಾನಗರದ ಹನ್ಸ್ ಹೊಟೆಲ್’ನಲ್ಲಿ ಆಯೋಜಿಸಲಾಗಿದೆ ಎಂದು ಖುತ್ವಿಕ್ ಸುಬ್ರಹ್ಮಣ್ಯ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಜಾಬ್ ಫೇರ್’ನಲ್ಲಿ 20 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ನೇರವಾಗಿ ಕಂಪನಿಗಳ ಮಾಲೀಕರೇ ಸಂದರ್ಶನ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉದ್ಯಮ ವಿಸ್ತರಿಸುವ ಕಂಪನಿಗಳೇ ಇದರ ಭಾಗವಹಿಸುತ್ತಿದ್ದಾರೆ. ಎಸ್.ಎಸ್.ಎಲ್.ಸಿ ಯಿಂದ ಹಿಡಿದು ಪಿಹೆಚ್ಡಿ ಮುಗಿಸಿದ ಅಭ್ಯರ್ಥಿಗಳು ಜಾಬ್ ಫೇರ್ ನಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಇನ್ನು ಈಗಾಗಲೇ 500 ಕ್ಕೂ ಹೆಚ್ಚು ಅಭ್ಯರ್ಥಿಗಳು ನೊಂದಣಿಮಾಡಿಕೊಂಡಿದ್ದಾರೆ. ಇನ್ನೂ 500 ಅಭ್ಯರ್ಥಿಗಳು ನೊಂದಣಿಯಾದಲ್ಲಿ ರಿಜಿಸ್ಟರ್ ಸ್ಥಗಿತಗೊಳಿಸಲಾಗುವುದು. ಹೀಗಾಗಿ ಅಭ್ಯರ್ಥಿಗಳು ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್ ನಡಕಟ್ಟಿ, ಆನಂದ ಬೈದೂರ ಇದ್ದರು.