ಕಾಮಗಾರಿಗಳು ಮುಕ್ತಾಯ ಗೊಂಡರುಬಿಲ್ ಪಾವತಿಸಲು ಪಾಲಿಕೆ ಹಿಂದೇಟು:ಅಂಬಿಗೇರ ಆರೋಪ!
dakhani

POWER CITY NEWS : HUBLI| ಹುಬ್ಬಳ್ಳಿ:
ಸಿವಿಲ್ ಗುತ್ತಿಗೆದಾರರು ನಿರ್ವಹಿಸಿದ ಗುತ್ತಿಗೆದಾರರ ಬಾಕಿ ಬಿಲ್ಲನ್ನು ೧೫ ದಿನದೊಳಗೆ ಬಾಕಿ ಉಳಿದ ೧೮೦ ಕೋಟಿ ಬಿಲ್ಲಿನಲ್ಲಿ(Bill) ೧೦೦ ಕೋಟಿ ತತ್ತಕ್ಷಣ ಪಾವತಿಸಬೇಕು. ಪಾವತಿಸದೇ ಹೋದಲ್ಲಿ ಪಾಲಿಕೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ(protest) ಮಾಡಲಾಗುವುದು ಎಂದು ಹುಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಪಂಪಣ್ಣ ಅಂಬಿಗೇರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ(pressmeet) ಮಾತನಾಡಿದ ಅವರು, ಪಾಲಿಕೆ ಆಯುಕ್ತರಿಗೆ, ಲೆಕ್ಕಾಧಿಕಾರಿಗಳಿಗೆ ಹಾಗೂ ಮಹಾಪೌರರಿಗೆ ಎಚ್ಚರಿಸಿದ ಅವರು, ಈ ವಿಚಾರವಾಗಿ ಈ ಹಿಂದೆ ಅನಿರ್ಧಿಷ್ಟವಧಿ ಮುಷ್ಕರವನ್ನು ಪಾಲಿಕೆ(hdmc) ಮುಂದೆ ಹಮ್ಮಿಕೊಳ್ಳಲಾಗಿತ್ತು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಣ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಹಾಪೌರರಿಗೆ ಹಾಗೂ ಆಯುಕ್ತರಿಗೆ ಸೂಚಿಸಿದ್ದರು. ಆದರೆ ಈ ಕುರಿತು ಚಕಾರವೆತ್ತಿಲ್ಲ. ಪಾಲಿಕೆಯು ಸಂಪೂರ್ಣ ದಿವಾಳಿಯಾಗಿದ್ದು ಗುತ್ತಿಗೆದಾರರ(tender) ಬದುಕು ಬೀದಿಗೆ ಬಿದ್ದಿದೆ. ಹುಧಾ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಈ ತರಹ ಗುತ್ತಿಗೆದಾರರಿಗೆ ಬಿಲ್ಲನ್ನು ಪಾವತಿಸದೇ ಅನ್ಯಾಯ ನಡೆದಿದ್ದಲ್ಲ ಎಂದು ಅವರು ಅಸಮಾಧಾನಗೊಂಡರು.
ಜಿಲ್ಲಾ ಉಸ್ತುವಾರಿ ಸಚಿವರು ಗುತ್ತಿಗೆದಾರರಿಗೆ ಬಿಲ್ಲು ಪಾವತಿಸಿ ಎಂದು ಸೂಚನೆ ನೀಡಿದರೂ ಕೂಡಾ ಆಯುಕ್ತರಾಗಲಿ ಹಾಗೂ ಲೆಕ್ಕಾಧಿಕಾರಿಗಳಾಗಲಿ ಕ್ಯಾರೆ ಎನ್ನುತ್ತಿಲ್ಲ ಎಂದರು.
ಹೀಗಾಗಿ ೧೫ ದಿನ ಗಡುವು ನೀಡಿ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಮೋಹನ ಗೌಡರ, ವಸೀಮ ಸನದಿ, ಶಿವಪ್ರಸಾದ್ ಉಪಸ್ಥಿತರಿದ್ದರು.