ಕಾರ್ಮಿಕರ ಮನವೊಲಿಸಿದ ಸಚಿವ ಲಾಡ್ ಕಾರ್ಯಕ್ಕೆ ಸಾಥ್ ನೀಡಿದ ಕಮಿಷನರ್!
Dakhani
PowerCityNews Hubli : ಹುಬ್ಬಳ್ಳಿ : ಕಳೆದ ೧೨ ದಿನಗಳಿಂದ ಬಿಡಿಕೆ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಇಂದು ಭೇಟಿ ನೀಡಿ ಬಿಡಿಕೆ ಕಾರ್ಮಿಕರ ಸಮಸ್ಯೆ ಆಲಿಸಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ಎರ್ಪೋರ್ಟ್ ಎದುರಿನ ಬಿಡಿಕೆ ವಾಲ್ವ್ಸ್ ವೇರ್ ಕಂಪನಿ ವಿರುದ್ಧ ಮುಷ್ಕರ ನಡೆಸುತ್ತಿರುವ ಸ್ಥಳಕ್ಕಾಗಮಿಸಿದ ಸಚಿವರನ್ನ ಕಂಡ ಕಾರ್ಮಿಕರು ಜೈಕಾರ ಮೊಳಗಿಸಿದರು. ಈ ವೇಳೆ ಮುಷ್ಕರದಲ್ಲಿ ಭಾಗವಹಿಸಿದ್ದ ಪ್ರತಿಯೋಬ್ಬ ಕಾರ್ಮಿಕನ ಸಮಸ್ಯೆಗಳನ್ನು ಆಲಿಸಿದ ಸಚಿವರು. ಸ್ಥಳದಿಂದಲೇ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾಹಿತಿ ಪಡೆದು ನಂತರ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.
ಪ್ರಕರಣ ಈಗಾಗಲೇ ಕಾರ್ಮಿಕರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಕಾರ್ಮಿಕರ ದೂರಿನ ಆಧಾರದ ಮೇಲೆ ಬಿಡಿಕೆ ಸಂಸ್ಥೆಗೆ ನೀಡಲಾಗಿದ್ದ ಹೊರಗುತ್ತಿಗೆ ಕಾರ್ಮಿಕ ಪರವಾನಿಗೆಯನ್ನು ಸಹ ರದ್ದು ಪಡಿಸಿದ್ದೇವೆ. ಆದರೆ ಇದನ್ನ ಪ್ರಶ್ನಿಸಿರು ಬಿಡಿಕೆ ಆಡಳಿತ ಮಂಡಳಿ ಹೊರಗುತ್ತಿಗೆ ಕಾರ್ಮಿಕರ ಪರವಾನಗಿ ರದ್ದು ಮಾಡಿದ್ದನ್ನ ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಧ್ಯದ ಸ್ಥಿತಿಯಲ್ಲಿ ನಾನು ಕೂಡ ಕಾನೂನು ಮಿರಿ ಮಾತನಾಡಲು ಸಾಧ್ಯವಿಲ್ಲ ಎಂದರು. ಇ ವೇಳೆ ನೊಂದ ಕಾರ್ಮಿಕರ ಪೈಕಿ ಕೆಲವರು ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ಸಚಿವರ ಎದುರಲ್ಲೇ ಎಚ್ಚರಿಕೆ ನೀಡಿದರೆ. ಇನ್ನುಳಿದ ಕಾರ್ಮಿಕರು ಕಳೆದ ಹತ್ತು ತಿಂಗಳಿನಿಂದ ಸಂಬಳ ವಿಲ್ಲದೆ ಸಾಲ ಸೋಲ ಮಾಡಿ ಜೀವ ಸಾಗಿಸುತ್ತಿದ್ದೇವೆ. ನಮ್ಮ ಮನೆತನದ ಅನೂಕೂಲುಕ್ಕಾಗಿಯಾದರೂ ಸಹ ವೇತನ ಕೊಡಿಸುವಂತೆ ಬೇಡಿಕೊಂಡರು.
ಆದರೆ ಇವೆಲ್ಲದಕ್ಕೂ ತಾಳ್ಮೆಯಿಂದ ಉತ್ತರಿಸಿದ ಸಚಿವರು ಸಧ್ಯದ ಸ್ಥಿತಿಯಲ್ಲಿ ಬಿಡಿಕೆ ಸಂಸ್ಥೆಯ ನೂತನ ಮಾಲಿಕರೊಂದಿಗೆ ಈಗಾಗಲೇ ಹಲವು ಬಾರಿ ಚರ್ಚೆ ಮಾಡಿದರು ಸಹ ಅವರು ಕೂಡ ಒಪ್ಪುತ್ತಿಲ್ಲ. ಆದ್ರೂ ಸಹ ಮತ್ತೋಮ್ಮೆ ಮಾಲಿಕರೊಂದಿಗೆ ಚರ್ಚಿಸುವೆ, ಒಂದುವೇಳೆ ನಿಮಗೇನಾದ್ರೂ ತೀರಾ ತೊಂದರೆ ಇದ್ರೆ ನಾನು ನನ್ನ ವಯಕ್ತಿಕವಾಗಿ ಸಹಾಯ ಮಾಡುವೆ ಎಂದು ಭರವಸೆ ನೀಡಿದರು.
ಇದೆ ವೇಳೆ ಸ್ಥಳದಲ್ಲಿದ್ದ ಅವಳಿನಗರದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಕೂಡ ಸಚಿವರಿಗೆ ಸಾಥ್ ನೀಡಿದ್ದು. ಈಗಾಗಲೇ ಹೈಕೋರ್ಟ್ ನಿಂದ ಬಂದ ಆದೇಶದ ಅನುಸಾರ ಕಾರ್ಮಿಕರು ಯಾವುದೇ ತರಹದ ಕಾನೂನಿಗೆ ವಿರುದ್ಧ ವಾದ ಚಟುವಟಿಕೆಗೆ ಮುಂದಾಗಬಾರದು.
ಇಲ್ಲಿಯವರೆಗೂ ಪೊಲೀಸ್ ಇಲಾಖೆ ಕೂಡ ಎಲ್ಲತರಹದ ಸಹಕಾರ ಮುಷ್ಕರ ನಿರತ ಕಾರ್ಮಿಕರಿಗೆ ನೀಡಿದೆ.ಇನ್ನು ಮುಂದೆಯೂ ಕೂಡ ನೀವು ಶಾಂತತೆಯಿಂದ ವರ್ತಿಸಿದರೆ ಎಲ್ಲವೂ ಸರಿಯಾಗಲಿದೆ ಎಂದು ಕಾರ್ಮಿಕರಿಗೆ ಭರವಸೆ ಮೂಡಿಸಿದರು.
ಇದಕ್ಕೆ ಸಚಿವ ಲಾಡ್ ಕಾರ್ಮಿಕರಿಗೆ ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿಕೊಂಡರು.ಕಾರ್ಮಿಕರು ಕೂಡ ಸಚಿವರ ಭರವಸೆಗೆ ಒಗೊಟ್ಟು ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದಿದ್ದಾರೆ.
ಇ ವೇಳೆ ಪವರ್ ಸಿಟಿ ನ್ಯೂಸ್ ಜೊತೆ ಮಾತನಾಡಿದ ಕಾರ್ಮಿಕರು “ಪವರ್ ಸಿಟಿ” ನ್ಯೂಸ್ ಕಾರ್ಮಿಕರ ಧ್ವನಿಯಾಗಿ ಸಲ್ಲಿಸಿದ ಸೇವೆ ಶ್ಲಾಘನೀಯವಾಗಿದೆ. ಮುಂಬರುವ ದಿನಗಳಲ್ಲಿ ನೊಂದವರ ಹಾಗೂ ಸತ್ಯದ ಪರವಾಗಿ ನಿಲ್ಲಲಿ ಎಂದು ಶುಭ ಹಾರೈಸಿದ್ದಾರೆ.
ಎಮ್ ಆರ್ ದಖನಿ, ಪವರ್ ಸಿಟಿ ನ್ಯೂಸ್ (ಹುಬ್ಬಳ್ಳಿ)