BREAKING NEWSCITY CRIME NEWSDHARWADKalghatagiLife StyleNAVANAGARPolitical newsProtest

ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಬಹುತೇಕ ಬಿಜೆಪಿ ಪಾಲು!

Hdmc Commeties president

POWER CITY :HUBLI: ಹು-ಧಾ ಮಹಾನಗರ ಪಾಲಿಕೆಯ 4 ಸ್ಥಾಯಿ ಸಮಿತಿಗಳ ಒಟ್ಟು 2 ಸದಸ್ಯ ಸ್ಥಾನಗಳಿಗೆ ಗುರುವಾರ ಅವಿರೋಧ ಆಯ್ಕೆ ನಡೆಯಿತು.

ಇವರಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಗೆ ಚಂದ್ರಶೇಖರ ಮನಗುಂಡಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ರಾಜಣ್ಣ ಕೊರವಿ, ನಗರ ಯೋಜನೆ ಸ್ಥಾಯಿ ಸಮಿತಿಗೆ ಶಂಕರ ಶೇಳಕೆ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿಗೆ ಉಮಾ ಮುಕುಂದ ಅಧ್ಯಕ್ಷರಾಗುವುದು ಬಹುತೇಕ ಖಚಿತ ಪಟ್ಟಿದೆ. ಇನ್ನೊಂದು ವಾರದ ಅವಧಿಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇಯರ್ ರಾಮಪ್ಪ ಬಡಿಗೇರ ನೇತೃತ್ವದಲ್ಲಿ ನಡೆಯಲಿದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಎಲ್ಲ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಮಲಪಡೆಯ ಪಾಲಾಗಲಿದೆ.

ಇಲ್ಲಿಯ ಪಾಲಿಕೆ ಸಭಾಭವನದಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ನಡೆಸಿಕೊಟ್ಟರು. ಪ್ರತಿ ಸ್ಥಾಯಿ ಸಮಿತಿಯ ತಲಾ 7 ಸದಸ್ಯ ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ 4 ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ಗೆ 3 ಸ್ಥಾನಗಳು ನಿಗದಿಯಾಗಿವೆ. ಅದರಂತೆ ಪಕ್ಷವಾರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಪ್ರತಿ ಸ್ಥಾಯಿ ಸಮಿತಿಗೆ ನಿಗದಿತ 7 ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ
ಘೋಷಿಸಲಾಯಿತು.
ಮೇಯ‌ರ್ ರಾಮಪ್ಪ ಬಡಿಗೇರ, ಉಪ ಮೇಯ‌ರ್ ದುರ್ಗಮ್ಮ ಬಿಜವಾಡ, ಸಹಾಯಕ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಉಪ ಆಯುಕ್ತ (ಆಡಳಿತ) ಆನಂದ ಕಲ್ಲೊಳಿಕರ, ಇತರರು ಇದ್ದರು.
ಸದಸ್ಯರಾಗಿ ಆಯ್ಕೆಯಾದವರು: ತೆರಿಗೆ ನಿರ್ಧರಣೆ, ಹಣಕಾಸು
ಹಾಗೂ ಅಫೀಲುಗಳ ಸ್ಥಾಯಿ ಸಮಿತಿ: ಚಂದ್ರಶೇಖರ ಮನಗುಂಡಿ, ಶಾಂತಾ ಹಿರೇಮಠ, ರೂಪಾ ಶೆಟ್ಟಿ, ರತ್ನಬಾಯಿ ನಾಝರೆ, ಸರತಾಜ ಅದವಾನಿ, ಮಂಗಳಾ ಗೌರಿ ಮತ್ತು ಮಂಜುನಾಥ ಬುರ್ಲಿ.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ
ಸ್ಥಾಯಿ ಸಮಿತಿ: ರಾಜಣ್ಣ ಕೊರವಿ, ಮಹಾದೇವಪ್ಪ ನರಗುಂದ,
ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ, ಮಹ್ಮದ್ ಇಕ್ಬಾಲ್
ನವಲೂರ, ಫಹಮೀದಾ ಕಾರಡಗಿ ಮತ್ತು ಸೂರವ್ವ ಪಾಟೀಲ.
ನಗರ ಯೋಜನೆ ಸ್ಥಾಯಿ ಸಮಿತಿ: ಶಂಕರ ಶೇಳಕೆ, ಸೀಮಾ ಮೊಗಲಿಶೆಟ್ಟರ್, ಲಕ್ಷ್ಮೀ ಹಿಂಡಸಗೇರಿ, ನೀಲವ್ವ ಅರವಳದ, ಶಂಭುಗೌಡ ಸಾಲಿಮನಿ, ಶಿವಕುಮಾರ ರಾಯನಗೌಡರ ಮತ್ತು ಬೀಬಿ ಮರಿಯಮ್ಮ ಮುಲ್ಲಾ.
ಲೆಕ್ಕಗಳ ಸ್ಥಾಯಿ ಸಮಿತಿ: ಪ್ರೀತಿ ಖೋಡೆ, ಸುನೀತಾ ಮಾಳವದಕರ,
ಉಮಾ ಮುಕುಂದ, ಅನೀತಾ ಚಳಗೇರಿ, ಪ್ರಕಾಶ ಕುರಹಟ್ಟಿ, ಬಿಲಕಿಸಬಾನು ಮುಲ್ಲಾ ಮತ್ತು ಮುನಸೂರ ಮುದಗಲ್ಲ.

Related Articles

Leave a Reply

Your email address will not be published. Required fields are marked *