ಹಾಡಹಗಲೇ ಬ್ಯಾಂಕ್ ದರೋಡೆಗೆ ಯತ್ನಿಸಿದ: ಮಂಜ್ಯಾ ಅರೆಸ್ಟ್!
Raja Dakhani
POWER CITYNEWS : HUBLI
ಹುಬ್ಬಳ್ಳಿ: ಕಳೆದ ವಾರವಷ್ಟೆ ರಾತ್ರಿ ವೇಳೆಗೆ ಯೂಟ್ಯೂಬ್‌ರ ಸಾಹೀಲ್ ಎಂಬ ಯುವಕನನ್ನ ರಾತ್ರಿ ನಿರ್ಜನ ಪ್ರದೇಶದಲ್ಲಿ ತಡೆಗಟ್ಟಿ ಐಫೋನ್,ಡಿಯೋ ಸ್ಕೂಟರ್,ಮತ್ತು ಬ್ಯಾಗನ್ನ ದರೋಡೆ ಮಾಡಿದ ಘಟನೆಗೆ ಸಂಭಂದಿಸಿದಂತೆ ಕಸಬಾ ಪೇಟೆ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.
ಇಂತಹ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಪೋಲಿಸರಿಂದ ನಡೆದಿರುವ ಬೆನ್ನಲ್ಲೇ ದರೋಡೆ ಯತ್ನದ ಮತ್ತೋಂದು ಪ್ರಕರಣ ನವನಗರದ ಎಪಿ ಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಎಂದಿನಂತೆ ಬ್ಯಾಂಕ್ ಸಿಬ್ಬಂದಿಗಳು ಕರ್ತವ್ಯನಿರತರಾಗಿದ್ದರು.ಗ್ರಾಹಕರು ಕೂಡ ಬ್ಯಾಂಕಿನಲ್ಲಿ ಅಷ್ಟೇನೂ ಇರದ ವೇಳೆ ಗಮನಿಸಿದ ದರೋಡೆ ಕೋರ ನೇರವಾಗಿ ಬ್ಯಾಂಕ್ ಸಿಬ್ಬಂದಿಯ ಕುತ್ತಿಗೆಗೆ ಚಾಕು ಇರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇವೇಳೆ ಬಿಡಿಸಲು ಮುಂದಾದ ಸಿಬ್ಬಂದಿಗಳನ್ನ ತಳ್ಳಾಡಿದ್ದಾನೆ. ಇನ್ನೇನು ತಾನು ಮಾಡಿದ್ದ ಪ್ಲ್ಯಾನ್ ಫೇಲಾಯ್ತು ಎಂದುಕೊಂಡು ಸ್ಥಳದಿಂದ ಒಡಲು ಯತ್ನಿಸಿದ ದರೋಡೆಕೊರನನ್ನ ಪೊಲಿಸ್ ಇನ್ಸ್‌ಪೆಕ್ಟರ್ ಸಮಿಯುಲ್ಲಾ ದರೋಡೆಗೆ ಶಸ್ತ್ರ ಸಜ್ಜಿತ ವಾಗಿ ಬಂದವನನ್ನ ಹೆಡೆಮುರಿಕಟ್ಟಿ ಠಾಣೆಗೆ ತಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆಗೆ ದರೋಡೆಗೆ ಯತ್ನಿಸಿದ ವ್ಯಕ್ತಿಯನ್ನು ಮಂಜುನಾಥ ಹಬೀಬ ಎನ್ನಲಾಗಿದ್ದು ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ ಬ್ಯಾಗ್ ಹಾಗೂ ಎರಡು ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿದ್ದು.ನವನಗರದ ಎಪಿ ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ತನಿಖೆ ಮುಂದುವರೆದಿದೆ.
ನವನಗರ ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.