ನಕಲಿ ಪೊಲೀಸರ ಬಂಧನದ ಸತ್ಯ ಮಿಥ್ಯ?
POWER CITYNEWS : HUBLI
ಹುಬ್ಬಳ್ಳಿ : ಮಹೀಳೆಯೊರ್ವಳ ಮನೆಗೆ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಯಲ್ಲಿನ ವಾತಾವರಣ ಚಿತ್ರಿಕರಿಸಿ ಇಲ್ಲಿ ಅಕ್ರಮ ವೈಶ್ಯಾ ವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದರು.ನಂತರದ ಬೆಳವಣಿಗೆಯಲ್ಲಿ ಪೊಲೀಸರ ಹೆಸರಲ್ಲಿ ಹಣ ಪಡೆದ ಘಟನೆ ಇಲ್ಲಿನ ಗೋಕುಲ ರಸ್ತೆಯ ಚೈತನ್ಯ ನಗರದಲ್ಲಿ ನಡೆದಿದೆ.
ಹೌದು ಅವಳಿನಗರದ ಕೆಲವೊಂದು ಅಕ್ರಮ ವೈಶ್ಯಾವಾಟಿಕೆ ದಂಧೆಗಳು ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಗುಟ್ಟು ರಟ್ಟಾಗಿದೆ. ಅದರಂತೆಯೇ ಅಮಾಯಕ ಹೆಣ್ಣಮಕ್ಕಳಿಗೆ ಹಣದ ಆಮಿಷ ಒಡ್ಡಿ ಅಡ್ಡಕಸುಬಿ ದಂಧೆಗೆ ತಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುವುದು ಸಾರ್ವಜನಿಕ ಬದುಕಲ್ಲಿ ಆತಂಕ ಸೃಷ್ಟಿಸಿದೆ. ಅಮಾಯಕರನ್ನೇ ಟಾರ್ಗೇಟ್ ಮಾಡುತ್ತಿರುವ ವ್ಯವಸ್ಥಿತ ದಂಧೆಕೋರರ ಹನಿಟ್ರ್ಯಾಪ್ ನಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಬೀಳಬೆಕಿದೆ.
ಇನ್ನೂ ಹಳೆಹುಬ್ಬಳ್ಳಿಯ ಪೊಲೀಸರು ಬಂದಿಸಿರುವ ಆರೋಪಿತರು ಹಳೆಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ವೈಶ್ಯಾವಾಟಿಕೆ ದಂಧೆಕೋರರ ಜೊತೆ ಮಾತು ಕತೆ ನಡೆಸಿರುವ ಕೆಲವು ವಿಡಿಯೋ ನಿಮ್ಮ “ಪವರ್ ಸಿಟಿ ನ್ಯೂಸ್” ಗೆ ಲಭ್ಯವಾಗಿದ್ದು. ನಕಲಿ ಪೊಲೀಸರ ಅಸಲಿ ಸತ್ಯ ಬಿಚ್ಚಿಡಲಿದೆ.