ರಸ್ತೆ ಅಪಘಾತ :ಲಾರಿಯಲ್ಲಿ ಸಿಲುಕಿದ ಮೂವರ ಜೀವ!
Lorry Accident!
POWER CITYNEWS : HUBBALLI
ಹುಬ್ಬಳ್ಳಿ :ಗದಗದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಮೈನ್ಸ್ ತುಂಬಿದ್ದ ಲಾರಿ ರಸ್ತೆ ಮಧ್ಯೇಯೆ ನಿಂತಿದೆ. ಇದರಿಂದ ಅದೆ ಮಾರ್ಗದಲ್ಲಿ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿ ನಿಂತ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಲ್ಲಿದ್ದ ಮೂವರು ಲಾರಿಯ ನಡುವೆ ಸಿಲುಕಿದ ಘಟನೆ ತಡರಾತ್ರಿ 11:30ರ ವೇಳೆಗೆ ನಗರದ ಹೊರವಲಯದ ಗದಗ ಶಿರಗುಪ್ಪಿ ನಡುವಿನ ಐಟಿಸಿ ಗುಡೌನ್ ಬಳಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ಲಾರಿಯ ಗಾಜುಗಳು ಒಡೆದು ಮೂವರ ಅರ್ಧ ದೇಹಗಳು ಲಾರಿ ಅಡಿಯಲ್ಲಿ ಸಿಲುಕಿದ್ದವು. ಅಪಘಾತದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಸಾರ್ವಜನಿಕರು ಹರ ಸಾಹಸ ಪಟ್ಟರು. ಇ ವೇಳೆ ರಸ್ತೆ ಅಪಘಾತ ಕುರಿತು ದೂರವಾಣಿ ಮೂಲಕ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಾದ ಗೋಪಾಲ್ ಬ್ಯಾಕೋಡಿಯವರನ್ನು ಸಹಾಯ ಕೋರಿದ ಬೆನ್ನಲ್ಲೇ ಗ್ರಾಮೀಣ ಭಾಗದ ಪೊಲಿಸರು, ಹೈವೆ ಅಂಬ್ಯುಲೆನ್ಸ್ ಸೇರಿದಂತೆ ಎರಡು ಅಂಬ್ಯುಲೆನ್ಸ್ ಗಳು ಸ್ಥಳಕ್ಕೆ ಬಂದು ಗಾಯಾಳುಗಳನ್ನು ರಕ್ಷಿಸಿ ಸುರಕ್ಷಿತ ವಾಗಿ ಹೊರತೆಗೆದಿದ್ದಾರೆ.
ಗಾಯಗೊಂಡವರನ್ನು ಭಾನಾಪುರದ ನಿವಾಸಿಗಳಾದ ಈಶ್ವರಯ್ಯ ಶಶಿ ಹಾಗೂ ಮಲ್ಲಪ್ಪಾ ಅಂಗಡಿ ಎಂದು ಗುರುತಿಸಲಾಗಿದೆ.ಇವರು ತರಕಾರಿ ವ್ಯಾಪಾರಿಗಳಾಗಿದ್ದು ಹುಬ್ಬಳ್ಳಿಯ ಎಪಿ ಎಂ ಸಿಗೆ ಹೊರಟಿದ್ದರು.ಧಾರವಾಡದ ಹೆಬ್ಬಳ್ಳಿ ಗ್ರಾಮದ ಕ್ಯಾಂಟರ್ ಚಾಲಕನನ್ನು ಶರಣಪ್ಪ ಈರಪ್ಪ ಶಿರೂರ ಎಂದು ಗುರುತಿಸಲಾಗಿದೆ.ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆ ಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಧಾರವಾಢ ಜಿಲ್ಲಾಪೊಲಿಸ್ ವರಿಷ್ಠಾದಿಕಾರಿಗಳಾದ ಗೋಪಾಲ್ ಬ್ಯಾಕೋಡ ಅವರು ಸಮಯಕ್ಕೆ ಸರಿಯಾಗಿ ನೀಡಿದ ಸ್ಪಂದನೆ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.