BREAKING NEWSCITY CRIME NEWSDHARWADHubballi

ಉಂಡ ಮನೆಯ ದೀಪ ಆರಿಸಿತೆ… ಹಳೆವೈಷಮ್ಯ!

Murder

POWER CITYNEWS : HUBBALLI

ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ತನ್ನಗಿದ್ದ ಅವಳಿನಗರದ ಕ್ರೈಂ ಜವರಾಯ ಇದೀಗ ಮತ್ತೋಮ್ಮೆ ಶುರು ಹಚ್ಕೊಂಡಂತೆ ಕಾಣ್ತಿದೆ.ಒಂದೆ ತಟ್ಟೆಯಲ್ಲಿ ಉಂಡವ ಅದೆ ಮನೆಯ ದೀಪ ಆರಿಸಿದ ಘಟನೆ

ಹೌದು ನಿನ್ನೆ ರಾತ್ರಿ ಯುವಕನೊಬ್ಬನನ್ನು ಆತನ ಮನೆ ಎದುರಿನ ಸ್ನೇಹಿತನೆ ಬಡಿಗೆ ಹಾಗೂ ಹರಿತವಾದ ಆಯುಧಗಳಿಂದ ತಲೆ ಹಾಗೂ ಹೊಟ್ಟೆ ಭಾಗದ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಗೈದಿರುವ ಘಟನೆ ನಗರದ ನಾಗಶೆಟ್ಟಿಕೊಪ್ಪದಲ್ಲಿನ ದೊಡ್ಡ ಓಣಿಯಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಪೈಲ್ವಾನ್ ಪ್ರಕಾಶ ಮಾನೆ (25) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಇಬ್ಬರು ಆರೋಪಿಗಳು ಎನ್ನಲಾದ ಕಿರಣ್ ಬಡಿಗೇರ @ಕಿರಣ್ ಪಾನಿ ಹಾಗೂ ಆತನ ಸ್ನೇಹಿತ ಸಂಗಮೇಶ್ ಮೆಡ್ಲೇರಿ ಎಂಬುವವರನ್ನ ವಶಕ್ಕೆ ಪಡೆದು ಪೋಲಿಸರು ವಿಚಾರಣೆ ನಡೆಸಿದ್ದಾರೆ.

ಇನ್ನೂ ಕೊಲೆಯಾದ ಪ್ರಕಾಶ ಹಾಗೂ ಕಿರಣ ಒಂದೆ ಓಣಿಯ ಎದುರು ಬದರು ಮನೆಯ ನಿವಾಸಿಗಳಾಗಿದ್ದಾರೆ. ಚಿಕ್ಕಂದಿನಿಂದಲೂ ತಂದೆ ತಾಯಿಯ ಆಶಯದಂತೆ ಪ್ರಕಾಶ್ ಮಾನೆ ಪೈಲ್ವಾನ್ ಆಗಲೆಂದು ಸಾಂಗ್ಲಿ ಹಾಗೂ ಧಾರವಾಡದಲ್ಲಿ ತಾಲಿಮು ಕೊಡಿಸ್ತಿದ್ರು.ಆದ್ರೆ ಕಳೆದ ಏಳೆಂಟು ತಿಂಗಳ ಹಿಂದೆ ಪ್ರಕಾಶನ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರಿಂದ ಆತ ಪುನಃ ತಾಲಿಮು ಮಾಡೋಕೆ ಮರಳಿದ್ರೆ ಇವತ್ತು ಹೀಗೆ ಬೀದಿ ಹೆಣವಾಗುತ್ತಿರಲಿಲ್ಲವೇನೋ.

ಇನ್ನೂ ಕಿರಣ್ ಬಡಿಗೇರ ತಂದೆ ಕೂಡ ತಿರಿಹೊಗಿದ್ರೂ ತಾಯಿ ಈತನೊಂದಿಗೆ ಇರಲಿಲ್ಲ. ಹೆಂಡತಿಯೊಂದಿಗೆ ಇದೆ ಪ್ರಕಾಶ ನ ಮನೆ ಎದುರಿನ ಮನೆಯಲ್ಲಿ ವಾಸವಾಗಿದ್ದ ಕಿರಣ ವೃತ್ತಿಯಲ್ಲಿ ಶ್ಯಾಮಿಯಾನ ಮಂಟಪ ಕೆಲಸ ಮಾಡಿಕೊಂಡಿದ್ದ.

ಆದರೆ ಕಿರಣ ಹಾಗೂ ಪ್ರಕಾಶನ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಹೀಗಿರುವಾಗ ಯಾರೊಬ್ಬರೂ ಕೂಡ ಒಬ್ಬರನ್ನೊಬ್ಬರು ಕೊಲೆ ಮಾಡೋ ಉದ್ದೇಶಕ್ಕೆ ಮುಂದಾಗ್ತಾರೆ ಎಂದುಕೊಂಡಿರಲಿಲ್ಲ. ಆದ್ರೆ ನಿನ್ನೇಯೂ ಸಹ ಇದೆ ರೀತಿ ಮೊದಲಿಗೆ ಜಗಳವಾಡಿಕೊಂಡಿದ್ದರು ಎನ್ನಲಾಗಿದ್ದು, ಈ ವೇಳೆ ಓಣಿಯ ಹಿರಿಯರು ಬೈದು ಬುದ್ದಿ ಹೇಳಿದ್ದಾರೆ. ಆದ್ರೆ ರಾತ್ರಿ ಮತ್ತೆ ಇಬ್ಬರು ಜಗಳ ವಾಡಿಕೊಂಡಿದ್ದಾರೆ. ಇ ವೇಳೆ ನಡೆದ ಇಬ್ಬರ ನಡುವಿನ ಘರ್ಷಣೆಯಲ್ಲಿ ಪ್ರಕಾಶ ಗಂಭೀರವಾಗಿ ಗಾಯಗೊಂಡು ಕರಳು ಹೊರಕ್ಕೆ ಬಂದು ತೀರ ರಕ್ತಸ್ರಾವದಿಂದ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಇನ್ನೂ ಕಿರಣ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾನೆ.

ಯಾವಾಗ ಪ್ರಕಾಶ ಬದುಕಲ್ಲ ಎಂದು ಗೊಯ್ತಾಯ್ತೋ ಆಗಲೇ ತಾನೂ ಕೆಶ್ವಾಪುರ ಪೋಲಿಸ್ ಠಾಣೆಗೆ ಬಂದು ನಡೆದ ಘಟನೆಗೆ ವಿಷಯ ತಿಳಿಸಿ ಅಲ್ಲಿಂದಲೇ ಆತನೂ ಕೂಡ ಕಿಮ್ಸ್ ಆಸ್ಪತ್ರೆಗೆ ಮದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಸದ್ಯಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ಗಲಾಟೆ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಮೃತನ ಕುಟುಂಬಸ್ಥರು ಹಾಗೂ ಸ್ನೇಹಿತರ ಅಕ್ರಂದನ ಮುಗಿಲು ಮುಟ್ಟಿದೆ. ಕೊಲೆಗಾರನ ವಿರುದ್ಧ ಮೃತನ ತಾಯಿ ಹಾಕುವ ಶ್ರಾಪ ಕರಳು ಹಿಂಡುವಂತಿದೆ.

Related Articles

Leave a Reply

Your email address will not be published. Required fields are marked *