BREAKING NEWSCITY CRIME NEWSDHARWADHubballiPoliceರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಗಟಾರಿನಲ್ಲಿ ಸಿಕ್ತು ವ್ಯಕ್ತಿಯ ಶವ!
ಶವ ಪತ್ತೆ
POWER CITYNEWS :HUBBALLI
ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಹಳೆಹುಬ್ಬಳ್ಳಿ ಪೊಲಿಸ್ ಠಾಣಾ ವ್ಯಾಪ್ತಿಯ ದರ್ಗಾಬಳಿಯ ಗಟಾರವೊಂದರಲ್ಲಿ ಕಂಡು ಬಂದಿದೆ.
ಹಳೆಹುಬ್ಬಳ್ಳಿ ಹೆಗ್ಗೆರಿ ರಸ್ತೆಗೆ ಹೊಂದಿಕೊಂಡಂತೆ ದರ್ಗಾದ ಹಿಂದಿನ ರಸ್ತೆಯ ಬದಿಯಲ್ಲಿನ ಗಟಾರಿನಲ್ಲಿ ಅಂದಾಜು 44ವಯಸ್ಸಿನ ವ್ಯಕ್ತಿಯೊರ್ವ ಅನುಮಾನಾಸ್ಪದ ವಾಗಿ ಸಾವನ್ನಪ್ಪಿದ್ದು ಘಟನಾ ಸ್ಥಳಕ್ಕೆ ಹಳೆಹುಬ್ಬಳ್ಳಿ ಪೊಲಿಸರು ಭೇಟಿ ನೀಡಿ ಮೃತ ವ್ಯಕ್ತಿಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
ಮೃತ ವ್ಯಕ್ತಿಯು ತೆನೆಹೊತ್ತ ಮಹಿಳೆ ಕ್ರಮ ಸಂಖ್ಯೆ_2 ಎನ್ನುವ ಒಳ ಟಿ ಶರ್ಟ್ ಇದ್ದು ಮೇಲೆ ಬಿಳಿ ಬಣ್ಣದ ಚಕ್ಸ್ ಶರ್ಟ್ ಹಾಗೂ ಭಾಗಶಃ ಚಾಕಲೆಟ್ ಬಣ್ಣದ ಚಡ್ಡಿ ಧರಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಆದರೆ ಇತ ಯಾರೂ? ಯಾಕೆ ಇಲ್ಲಿ ಈತನ ಹೆಣ ಬಿತ್ತು! ಎನ್ನುವುದನ್ನು ಪೊಲಿಸರ ಅಧಿಕೃತ ಮಾಹಿತಿಯಿಂದಲೆ ತಿಳಿದು ಬರಬೇಕಿದೆ.ಕಳೆದವಾರವಷ್ಟೆ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿಯು ಕೂಡ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು!