BREAKING NEWSCITY CRIME NEWSHubballiPoliceTWINCITY

ಅವಳಿನಗರದ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಬಂಧನ!

POWER CITYNEWS: HUBBALLI

ಹುಬ್ಬಳ್ಳಿ: ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಹುಬ್ಬಳ್ಳಿಯ ವಿದ್ಯಾನಗರ ಪೊಲಿಸರು ಒರ್ವ ಅಂತರಾಜ್ಯ ಬೈಕ್ ಕಳ್ಳ ಹಾಗೂ ಸ್ಥಳೀಯ ಮನೆಯೊಂದರಲ್ಲಿನ ಬಂಗಾರ ಕಳ್ಳತನ ಮಾಡಿದ್ದ ಆರೋಪಕ್ಕೆ ಸಂಬಂದಿಸಿದಂತೆ ಒರ್ವ ಮಹಿಳೆಯನ್ನು ಬಂದಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ವಿವಿಧ ಆಸ್ಪತ್ರೆಗಳ ಆವರಣ ಹಾಗೂ ಮನೆಗಳ ಎದುರು ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದ್ದು ಬೆರೆ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾದ ಇಲ್ಲಿನ ಅಮರಗೋಳ ಕೆರಿ ಒಣಿಯ ನಿವಾಸಿ ಶಂಕರ್ ಗಡೇಕರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವಿದ್ಯಾನಗರ ಪೊಲಿಸರು ಇ ವೇಳೆ ಆರೋಪಿತನಿಂದ ಹಿರೋ ಕಂಪನಿಯ ಸ್ಪ್ಲೆಂಡರ್ ಬೈಕ್,ಡಿಯೋ ,ಆಕ್ಟಿವಾ ಸ್ಕೂಟರ್ ಹಾಗೂ ಮೂರು ಬುಲೆಟ್ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು10,ಲಕ್ಷರೂ. ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ ಮನೆಯೊಂದರಲ್ಲಿ ಹೊಮ್ ನರ್ಸಿಂಗ್ ಸೆವೆಸಲ್ಲಿಸುತ್ತಿದ್ದಳು ಎನ್ನಲಾದ ಶಿವಮೊಗ್ಗ ಜಿಲ್ಲೆಯ ಜಾಹ್ನವಿ @ಗೀತಾ ಎಂಬುವವಳು ಹುಬ್ಬಳ್ಳಿಯ ಲಿಂಗರಾಜ್ ನಗರದ ನಿವಾಸಿಯೊಬ್ಬರ ಮನೆಯಲ್ಲಿ ವೃದ್ಧೆಯೊಬ್ಬರ ಅರೈಕೆ ಮಾಡುತ್ತಿದ್ದರು.ಇ ವೇಳೆ ಅದೆ ಮನೆಯಲ್ಲಿನ 6ಲಕ್ಷ ಮೌಲ್ಯದ ಚಿನ್ನ ಕಳುವಾದ ಬಗ್ಗೆ ವಿದ್ಯಾನಗರ ಪೊಲಿಸ್ ಠಾಣೆಗೆ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನುಹತ್ತಿದ ಪೊಲೀಸರು. ಧಾರವಾಡದಲ್ಲಿ ಕಳ್ಳತನದ ಚಿನ್ನವನ್ನು ಮಾರಲು ಯತ್ನಿಸುತ್ತಿದ್ದ ಜಾಹ್ನವಿಯನ್ನು ವಶಕ್ಕೆ ಪಡೆದು ಆಕೆ ಬಳಿ ಇದ್ದ 3,50000/ರೂ ಮೌಲ್ಯದ ಬಂಗಾರ ವಶಪಡಿಸಿಕೊಂಡಿದ್ದಾರೆ.

ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಶ್ರೀ ಜಯಂತ ಗೌಳಿ ಇವರ ನೇತೃತ್ವದಲ್ಲಿ ವಿದ್ಯಾನಗರ ಠಾಣೆಯ ಶ್ರೀಮಂತ ಹುಣಸಿಕಟ್ಟಿ ಪಿ.ಎಸ್.ಐ [ಕಾವಸು] ಮತ್ತು ಶ್ರೀ ಬಿ.ಎನ್ ಕಲ್ಯಾಣಿ ಪಿ.ಎಸ್.ಐ (ಅವಿ) ಮತ್ತು ಸಿಬ್ಬಂದಿ ಜನರಾದ ಶ್ರೀ ಶಿವಾನಂದ.ಎಮ್.ತಿರಕಣ್ಣವರಸಯ್ಯದಅಲಿ ತಹಶೀಲ್ದಾರ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಪರುಶರಾಮ ಹಿರಗಣ್ಣವರ, ರಮೇಶ ಹಲ್ಲೆ, ಮಂಜುನಾಥ ಏಣಗಿ, ಶರಣ ಗೌಡ ಮೂಲಿಮನಿ ಆರೋಪಿತರ ಪತ್ತೇ ಕಾರ್ಯ ನಿರ್ವಹಿಸಿದ್ದು ಇರುತ್ತದೆ. ಕಾರ್ಯಾಚರಣೆಯ ತಂಡಕ್ಕೆ ಪೊಲೀಸ ಆಯುಕ್ತರು ಪತ್ತೇ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *