POWER CITYNEWS : KOPPAL
ಕೊಪ್ಪಳ
ಕಲ್ಲಿನ ಕ್ವಾರಿಯ ನೀರಲ್ಲಿ ಈಜಲು ಮುಂದಾದ ಶಾಲಾ ವಿದ್ಯಾರ್ಥಿಯೊರ್ವ ಧಾರುಣವಾಗಿ ಸಾವಿಗಿಡಾದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಸಂಭವಿಸಿದೆ.
ಮೃತ ದುರ್ಧೈವಿಯನ್ನು ಒಂಬತ್ತನೇ ತರಗತಿಯ ವಿಧ್ಯಾರ್ಥಿ ಪ್ರದೀಪ ಎಂದು ಗುರುತಿಸಲಾಗಿದೆ.ಮುರಾರ್ಜಿದೇಸಾಯಿ ವಸತಿ ಶಾಲೆಯ ಸಮೀಪವಿರುವ ಪಾಳು ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಿ ಹಾಗೆ ಬಿಟ್ಟ ಪರಿಣಾಮವಾಗಿ ಅಲ್ಲಿ ಶೇಕರಣೆಯಾದ ನೀರಿನ ಬಳಿ ಮುರಾರ್ಜಿ ವಸತಿ ನಿಲಯದ ಮೂವರು ವಿದ್ಯಾರ್ಥಿಗಳು ಮಧ್ಯಾಹ್ನದ ವೇಳೆ ತೆರಳಿದ್ದಾರೆ ಅದರಲ್ಲಿ ಓರ್ವ ಪ್ರದೀಪ್ ಎಂಬ 9ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದ ವಿಧ್ಯಾರ್ಥಿ ಈಜಲು ಮುಂದಾಗಿದ್ದಾನೆ.
ಇ ವೇಳೆ ಮೂವರ ಪೈಕಿ ಪ್ರದೀಪ ಮಾತ್ರ ಈಜಲು ನೀರಿಗೆ ಧುಮುಕಿದ್ದಾನೆ ಸಮಯ ಕಳೆದರು ಪ್ರದೀಪ ಮೇಲೆ ಬರದಿದ್ದಾಗ ವಿಷಯ ಶಾಲಾ ಸಿಬ್ಬಂದಿಗೆ ತಿಳಿಸಿದ್ದಾರೆ.ಮದ್ಯಾಹ್ನ ಊಟಕ್ಕೆ ಬಿಟ್ಟ ಸಂಧರ್ಭದಲ್ಲಿ ಶಾಲಾ ಸಿಬ್ಬಂದಿಗಳ ಕಣ್ ತಪ್ಪಿಸಿ ವಿಧ್ಯಾರ್ಥಿಗಳು ಶಾಲಾ ಆವರಣದಿಂದ ಹೊರ ಹೊಗಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕುಕನೂರು ಪೊಲೀಸ್ ಠಾಣೆಯ ಪಿಎಸ್ ಐ ಟಿ. ಗುರುರಾಜ ಭೇಟಿ ನೀಡಿ ಸ್ಥಳ ಪರಿಸಿಲಿಸಿದ್ದು. ಅಗ್ನಿ ಶಾಮಕ ಸಿಬ್ಬಂದಿಗಳ ಸಹಾಯದಿಂದ ವಿಧ್ಯಾರ್ಥಿಯ ಮೃತದೇಹವನ್ನು ಹೊರಕ್ಕೆ ತೆಗೆದಿದ್ದು. ಕುಕನೂರು ಪೊಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವರದಿ : ಚಂದ್ರ ಶೇಖರ್