POWER CITYNEWS : HUBBALLI
ಹುಬ್ಬಳ್ಳಿ
ಅದೆಷ್ಟೋ ಕುಟುಂಬಗಳು ಬೀದಿಗೆ ಬಂದ ಮೇಲೆ!
ಹೌದು ಹಳೆಹುಬ್ಬಳ್ಳಿ ಪೊಲಿಸ್ ಠಾಣೆಯ ಮೇಲಿನ ಕಲ್ಲು ಎಸೆತ ಸರ್ಕಾರಿ ಆಸ್ತಿಪಾಸ್ತಿ ಹಾನಿಗೊಳಪಡಿಸಿದ ಮತ್ತು ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಹಾಗೂ ಕೋಮುಗಲಭೆ ಆರೋಪದ ಮೇಲೆ ಸುಮಾರು ಹಳೆಹುಬ್ಬಳ್ಳಿ ಸುತ್ತಮುತ್ತಲಿನ ಸುಮಾರು 165 ಕ್ಕೂ ಹೆಚ್ಚಿನ ಯುವಕರನ್ನು ಹಳೆಹುಬ್ಬಳ್ಳಿ ಪೊಲೀಸರು ಬಂದಿಸಿ ನ್ಯಾಯಾಂಗ ಬಂಧನ ವಿದಿಸಿದ್ದರು.
2021/4/17 ರಂದು ಪ್ರಚೋದನಾಕಾರಿ ಪೋಸ್ಟ್ ಮಾಡಿದ್ದರ ಹಿನ್ನೆಲೆಯಲ್ಲಿ ಒಂದು ಸಮುದಾಯದ ಸುಮಾರು ಯುವಕರು ಠಾಣೆಗೆ ಮುತ್ತಿಗೆ ಹಾಕಿತ್ತು. ಆದರೆ ಠಾಣೆಯ ಇನ್ಸ್ಪೆಕ್ಟರ್ ಮಾಡಿದ್ದ ಶಾಂತಿ ಸಂಧಾನದ ಪ್ರಯತ್ನ ವಿಫಲವಾಗುವ ಮುನ್ಸೂಚನೆ ಯ ಮೇರೆಗೆ ಮುಸ್ಲೀಂ ಮುಖಂಡರಾದ ಅಲ್ತಾಪ್ ಹಳ್ಳೂರ,ಬಸಿರ ಗುಡ್ಮಾಲ್ ಸೇರಿದಂತೆ ದಲಿತ ಮುಖಂಡರು ಸಹ ಸ್ಥಳಕ್ಕಾಗಮಿಸಿ ಧರಣಿ ನಿರತರ ಮನವೊಲಿಕೆಗೆ ಪ್ರಯತ್ನ ಪಟ್ಟಿದ್ದರು.
ಆದರೆ ಇ ವೇಳೆಗೆ ಎಲ್ಲಿಂದಲೋ ಬಂದು ಬಿದ್ದ ಕಲ್ಲುಗಳು ಗಲಭೆಗೆ ಕಿಚ್ಚು ಹಚ್ಚಿದ್ದವು. ಇವೇಳೆ ನಡೆಯಬಾರದ ಘಟನೆಗಳು ನಡೆದು ಹೊಗಿತ್ತು ಅಂದರೆ ಪೊಲೀಸರ ವಾಹನದ ಮೇಲೆ ಕಲ್ಲು ಇಟ್ಟಿಗೆ ಗಳಿಂದ ಎಸೆಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಪೊಲಿಸ್ ಆಯುಕ್ತರು ಪ್ರತ್ಯೇಕ 12ಪ್ರಕರಣ ಗಳನ್ನು ದಾಲಕಲಿಸಿ ಕೊಂಡಿತ್ತು. ಸಾವಿರಕ್ಕೂ ಹೆಚ್ಚಿನವರನ್ನು ವಿಚಾರಣೆ ನಡೆಸಿ ಬಳಿಕ 165 ಜನರನ್ನು ಬಂದಿಸಿತ್ತು ಬಂಧನದ ನಂತರದ ಎರಡು ವರ್ಷಗಳ ನಂತರ 35 ಆರೋಪಿಗಳಿಗೆ ಸುಪ್ರೀಂ ಜಾಮೀನು ನೀಡಿದೆ ಎಂದು ಹುಬ್ಬಳ್ಳಿಯ ಅಂಜುಮನ್ ಸಂಸ್ಥೆ ಹೇಳಿಕೊಂಡಿದೆ.