ಉಂಡು ಹೋದ ಕೊಂಡು ಹೋದ ನಂತರ ಒಡಿ ಬಂದವನು ಮಾಡಿದ್ದೇನು?
POWERCITY NEWS : HUBBALLI/ KUNDGOL
ಹುಬ್ಬಳ್ಳಿ
ಕುಂದಗೋಳ : ಒಂದೆ ಧರ್ಮದ,ತನ್ನದೆ ಸಂಭಧಿಕರ ಮೂಲದ ಯುವತಿಯೊಂದಿಗೆ ಪ್ರೀತಿಸಿದ್ದ ಯುವಕ ಕಳೆದ ಮೂರ್ನಾಲ್ಕುತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಕಾರ್ಯವನ್ನು ಮುಗಿಸಿಕೊಂಡಿದ್ದ. ಆದ್ರೆ ನಂತರದಲ್ಲಿ ಯುವಕನ ಮನೆಕಡೆಯವರು ಯುವತಿಯನ್ನ ನಿರಾಕರಿಸಿ ವಿವಾಹವೆ ಬೇಡವೆಂದು ಮೊಂಡತನಕ್ಕೆ ಮುಂದಾದ ಘಟನೆ ಕುಂದಗೋಳದಲ್ಲಿ ನಡೆದಿದೆ.
ಹೌದು ಗದಗ ಜಿಲ್ಲೆಯ ಯಳವತ್ತಿ ಗ್ರಾಮದ ಯುವಕ ಕುಮಾರ ಹಾಗೂ ಹಿರೇಬುದಿಹಾಳ ಗ್ರಾಮದ ಯುವತಿ ಪರಸ್ಪರ ಪ್ರೀತಿಸಿ ಎರಡು ಕುಟುಂಬಗಳ ಒಪ್ಪಿಗೆ ಪಡೆದು ನಂತರ ಹಿರೇಬುದಿಹಾಳ ಗ್ರಾಮದ ದಲಿತ ಸಮುದಾಯದ ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಕಾರ್ಯ ನಡೆದಿತ್ತು.
ನಂತರ ನಡೆದ ಬದಲಾವಣೆಯಲ್ಲಿ ಒಬ್ಬರಿಗೊಬ್ಬರು ಸಲುಗೆ ಬೆಳಸಿಕೊಂಡ ಯುವ ಜೋಡಿಗಳು ಮದುವೆಗೂ ಮುಂಚೆಯೇ ಎಲ್ಲವನ್ನೂ ಮುಗಿಸಿದ್ದವು. ಇದರಿಂದ ಯುವತಿ ಕೂಡ ಎರಡ್ಮೂರು ತಿಂಗಳ ಗರ್ಭವತಿಯೂ ಆಗುವಂತಾಯಿತು.
ತನ್ನ ತಪ್ಪಿನ ಅರಿವಾದ ನಂತರ ಹೆದರಿದ ಯುವತಿಯು ಯುವಕನಿಗೆ ಮದುವೆಯಾಗುವಂತೆ ತಿಳಿಸಿದ್ದಳು. ಆದ್ರೆ ಯುವಕನ ತಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು. ಯುವಕನು ಕೂಡ ಮದುವೆಗೆ ಹಾರಿಕೆ ಉತ್ತರ ನೀಡಿದ್ದರ ಬೆನ್ನಲ್ಲೇ, ಯುವತಿಯು ಇ ವಿಷಯವನ್ನ ತನ್ನ ತಾಯಿಗೆ ತನ್ನಿಂದಾದ ಪ್ರಮಾದದ ಬಗ್ಗೆ ತಿಳಿಸಿದ್ದಾಳೆ.
ಯುವತಿಯ ತಾಯಿ ನಡೆದ ಘಟನೆಯ ಬಗ್ಗೆ ಯುವಕನ ತಾಯಿಯ ಗಮನಕ್ಕೆ ತಂದಿದ್ದಾಳೆ. ಆದರೆ ಯುವಕನ ತಾಯಿ ಒಪ್ಪದೆ ಮದುವೆಯೆ ಬೇಡವೆಂದಿದ್ದಾರೆ. ಎಷ್ಟೇ ಬೇಡಿಕೊಂಡರು ಪ್ರಯೋಜನವಾಗದೆ ಇದ್ದಾಗ ಹಿರೇಬುದಿಹಾಳ ಗ್ರಾಮಸ್ಥರು ಹಾಗೂ ದಲಿತಪರ ಸಂಘಟನೆಯ ಮಧ್ಯಸ್ಥಿಕೆಯಲ್ಲಿ ನೊಂದ ಯುವತಿ ಪ್ರೀಯಕರನ ಮತ್ತು ಆತನ ಕುಟುಂಬದ ಮೇಲೆ ದೂರು ನೀಡಲು ಮುಂದಾದ ಬಳಿಕ ವಿಷಯ ತಿಳಿದು ಸ್ಥಳಕ್ಕೆ ಒಡಿ ಬಂದ ಪ್ರೀಯಕರ ಹಿರಿಯರ ಮಾತಿಗೆ ಒಪ್ಪಿ ಕೂಡಲೇ ಉಪನೊಂದಣಾಧಿಕಾರಿಗಳ ಕಚೇರಿ ಕುಂದಗೋಳ ಇವರಲ್ಲಿ ಯುವತಿಯೊಂದಿಗೆ ಕಾನೂನಾತ್ಮಕವಾಗಿ ವಿವಾಹವಾಗಿದ್ದಾನೆ.
ನಂತರ ಸಮೀಪದಲ್ಲಿನ ಕುಂದಗೋಳ ವೃತ್ತದಲ್ಲಿನ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ!ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಬಂದ ಪ್ರೇಮಿಗಳು ಹಿಂದೂ ಸಂಪ್ರದಾಯದ ಪ್ರಕಾರ ಪರಸ್ಪರರು ಹಾರ ಬದಲಾಯಿಸಿಕೊಂಡು ಯುವತಿಗೆ ತಾಳಿ ಕಟ್ಟಿದ್ದಾನೆ.
ಇ ವೇಳೆ ಯುವಕ-ಯುವತಿಯ ಎರಡು ಕಡೆಯ ಕುಟುಂಬಗಳು, ಹಿರೇಬುದಿಹಾಳ ಗ್ರಾಮಸ್ಥರು ಹಾಗೂ ದಲಿತ ವಿಮೋಚನಾ ಸಂಘಟನೆಯ ಸುರೇಶ್ ಖಾನಾಪುರ ಸೇರಿದಂತೆ ಸಂಘಟನೆಯ ಮತ್ತಷ್ಟು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇನ್ನೂ ವಿವಾಹವಾಗುತ್ತಿದ್ದಂತೆ
ಯುವಕನ ಕುಟುಂಬಸ್ಥರ ಜೊತೆ ಯುವತಿಯೂ ಕೂಡ ಯಳವತ್ತಿ ಗ್ರಾಮಕ್ಕೆ ನವಜೀವನದತ್ತ ಮುಖಮಾಡಿದ್ದಾಳೆ.
ಎನೆ ಇರಲಿ ಸಣ್ಣ ಪುಟ್ಟ ವಿಷಯಗಳಿಗೆ ಇಂದಿನ ಯುವ ಪೀಳಿಗೆಯು ಭಯದ ಭರದಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಗಿಂತ ಸ್ವಲ್ಪ ಆಲೋಚಿಸಿ ಹೆಜ್ಜೆ ಇಟ್ಟರೆ, ನಿರ್ಧಾರ ಗಟ್ಟಿಯಾಗಿದ್ದರೆ, ಸುಖಾಂತ್ಯಕ್ಕೆ ಸುಲಭದಾರಿ ತಾನೆ ಕಾಣುತ್ತದೆ. ಎನ್ನುತ್ತ ವಿವಾಹಿತ ನವ ಜೋಡಿಗೆ “ಪವರ್ ಸಿಟಿ ನ್ಯೂಸ್” ಶುಭ ಹಾರೈಸುತ್ತದೆ.
ಪವರ್ ಸಿಟಿ ನ್ಯೂಸ್! ನಿಮ್ಮ ಸುತ್ತಮುತ್ತಲಿನ ಸುದ್ದಿಗಳು ಹಾಗೂ ಮಾಹಿತಿ 7019894356 WhatsApp. ಮಾಡಿ