ಅಬಕಾರಿ ಇಲಾಖೆಯ ಮಾನ ಹರಾಜಿಗಿಟ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಿದ:ಲೋಕಾಯುಕ್ತ ಪೊಲಿಸ್!
Excise officers arrest.
POWERCITY NEWS : DAVANGERE/HUBBALLI
ದಾವಣಗೆರೆ: ಮಧ್ಯದ ಅಂಗಡಿ ಪರವಾನಗಿ ನೀಡಲು ಲಂಚ ಸ್ವೀಕರಿಸಿದ ಆರೋಪದಡಿ ಅಬಕಾರಿ ಇಲಾಖೆಯ ಉಪ ಆಯುಕ್ತೆ ಸೇರಿ ಅಬಕಾರಿ ಇಲಾಖೆಯ 4 ಅಧಿಕಾರಿಗಳು ಲೋಕಾಯುಕ್ತ ಪೊಲಿಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಹರಿಹರ ಮೂಲದ ರಂಗನಾಥ ಎಂಬುವವರು ಅಮರಾವತಿ ಬಳಿ ಸಿ ಎಲ್ -೭ ಮದ್ಯದಂಗಡಿ ಆರಂಭಿಸಲು ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದರು.ಬಹುದಿನಗಳಿಂದ ಅಬಕಾರಿ ಕಚೇರಿಗೆ ಅಲೆದರೂ ಕೂಡ ಅಧಿಕಾರಿಗಳು ಮಾತ್ರ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಆದರೆ ಶನಿವಾರದಂದು ಪರವಾನಿಗೆ ನೀಡಲು 30 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾದ ಹರಿಹರ ಅಬಕಾರಿ ಇಲಾಖೆಯ ನಿರೀಕ್ಷಕಿ ಶೀಲಾ ಹಾಗೂ ಕಚೇರಿಯ ಸಿಬ್ಬಂದಿ ಶ್ರೀಶೈಲಾ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವ ಮಾಹಿತಿ ಆಧರಿಸಿ. ಅರ್ಜಿದಾರರಿಂದ ಮುಂಗಡ ೩ಲಕ್ಷ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇ ವೇಳೆ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಸ್ವಪ್ನ, ಪ್ರಥಮ ದರ್ಜೆ ಸಹಾಯಕ ಅಶೋಕ ಎಚ್.ಎಂ,. ಹರಿಹರ ಅಬಕಾರಿ ವಲಯ ಕಚೇರಿಯ ಅಬಕಾರಿ ನಿರೀಕ್ಷಕಿ ಶೀಲಾ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಅವರನ್ನು ಲೋಕಾಯುಕ್ತ ತಂಡ ವಶಕ್ಕೆ ಪಡೆದಿದೆ.
ಆದರೆ ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾಗಲೆ ನಾಲ್ವರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿ ವಿಚಾರಣೆ ತನಿಖಾ ಹಂತದಲ್ಲಿದ್ದು.
ಇ ವೇಳೆ ದಾವಣಗೆರೆಯ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡ ಜಿಲ್ಲೆಯ ಇಂಗಳಹಳ್ಳಿ ಗ್ರಾಮದ ರವಿ ಮರಿಗೌಡರನ್ನು ಲೋಕಾಯುಕ್ತ ಪೊಲಿಸರು ಬಂದಿರುವ ಸುದ್ದಿ ತಿಳಿದ ರವಿ ಮರಿಗೌಡರ ತಾವು ತಂದಿದ್ದ ಕಾರನ್ನು ಮನೆಯ ಮುಂದೆಯೇ ಬಿಟ್ಟು, ಹಿಂಬಾಗಿಲಿನಿಂದ ಯಾರದೊ ಸಹಾಯದಿಂದ ಬೈಕ್ ಏರಿ ಪರಾರಿಯಾಗಿದ್ದಾರೆಂದು ಹೇಳಲಾಗಿದೆ.ಇನ್ನೂ ಲಂಚಪಡೆದ ಪ್ರಕರಣದಡಿ ವಿಚಾರಣೆಗಾಗಿ ಬಂದಿದ್ದ ಲೋಕಾಯುಕ್ತ ಪೊಲೀಸರು ಬರಿಗೈಯಲ್ಲಿ ಮರಳಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆಯವರ ನೇತೃದಲ್ಲಿ ಲೋಕಾಯುಕ್ತ ನಿರೀಕ್ಷಕರಾದ ಪ್ರಭು ಸೂರಿನ್, ಮಧುಸೂಧನ್ ಹಾಗೂ ಎಚ್ ಎಸ್ ರಾಷ್ಟ್ರಪತಿ ಸೇರಿದಂತೆ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು. ಭ್ರಷ್ಟಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇ ಹಿಂದೆ ಅವಳಿನಗರದಲ್ಲಿನ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಖಡಕ್ ಇನ್ಸ್‌ಪೆಕ್ಟರ್ ಪ್ರಭು ಸೂರಿನ ಅವರು ಹಲವಾರು ಪ್ರಕರಣಗಳನ್ನು ಬೆಧಿಸುವಲ್ಲಿ ಯಶಸ್ವಿಯಾಗಿದ್ದನ್ನ ನೆನೆಯಬಹುದಾಗಿದೆ.