ಸಾರ್ವಜನಿಕ ಗಣೇಶೋತ್ಸವಕ್ಕೆ ನಿಯಮಗಳ ಹೆಸರಲ್ಲಿ ಕಿರಿ ಕಿರಿ : ಬೆಲ್ಲದ್ ಆರೋಪ!
POWERCITY NEWS: HUBBALLI
ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ ವರ್ಷಕ್ಕೊಂದು ಬಾರಿಗೆ ಮಾತ್ರ ವಿಜೃಂಭಣೆಯಿಂದ ಆಚರಿಸಲಾಗುವ ಗಣೇಶ ಚತುರ್ಥಿ ಇದಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದುತ್ವದ ಹಬ್ಬ ಆಚರಣೆ ಹಾಗೂ ಸಾರ್ವಜನಿಕವಾಗಿ ಆಚರಿಸುವ ಗಣೇಶೋತ್ಸಗಳಲ್ಲಿ ಸಾಮೋಹಿಕವಾಗಿ ನಡೆಯುವ ಮೆರವಣಿಗೆಯಲ್ಲಿ ಬಳಸುವ ಡಿಜೆ,ಲೈಟಿಂಗ್ಸ್ ಗಳಿಗೆ ಮತ್ತು ವಿಸರ್ಜನೆಗೆ ನಿರ್ದಿಷ್ಟ ಸಮಯ ನಿಗದಿತ ಗಳನ್ನು ಹೆರಿರುವುದು ಹಬ್ಬಗಳಲ್ಲೂ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಇನ್ನುಳಿದಂತೆ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು ಅಭಿವೃದ್ಧಿ ವಿಚಾರಕ್ಕೆ ಸಂಭಂದಿಸಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವಳಿನಗರದ ಬಹುತೇಕ ಯೋಜನೆಗಳಲ್ಲಿ ಅಭಿವೃದ್ಧಿ ಮಾಡಲಾಗಿದೆ. ಉಳಿದಿರುವ ಅಲ್ಪ ಸ್ವಲ್ಪ ಮಟ್ಟಿಗಿನ ಕಾಮಗಾರಿಗಳ ಕುರಿತು ಸಂಭಂದಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.ಇ ಸಂಧರ್ಭದಲ್ಲಿ ಉಪಮೇಯರ್ ಸತೀಶ್ ಹಾನಗಲ್, ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಸುದ್ದಿಗೋಷ್ಠಿ ಉಪಸ್ಥಿತರಿದ್ದರು.