ರಾಜಕೀಯರಾಜ್ಯ

12 ಲಕ್ಷ.ರೂ ಮೌಲ್ಯದ 1 ಗಣಪ ಹುಬ್ಬಳ್ಳಿ ಟು ಬೆಂಗಳೂರಿಗೆ!

POWERCITY NEWS:HUBBALLI

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ 12 ಲಕ್ಷ ರೂ.ಗಳ ಮೌಲ್ಯದ ಅಮೇರಿಕನ್ ಡೈಮಂಡ ಹಾಗೂ ಪಂಚ ರತ್ನ ಹರಳುಗಳಿಂದ ನಿರ್ಮಿಸಿದ ಗಣಪತಿ ಮೂರ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಅಪರೂಪದ ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ!

ಹೌದು.. ಬಮ್ಮಾಪುರ ನಿವಾಸಿ ಮೂರ್ತಿ ಕಲಾವಿದ ಮಹೇಶ ಮುರಗೋಡ ಹಾಗೂ ಅವರ ತಂಡದವರು ನಿರ್ಮಿಸಿರುವ ಗಣೇಶ ಮೂರ್ತಿಯು ಬೆಂಗಳೂರ ರಾಜಾಜಿನಗರ 2ನೇ ಹಂತ ಮಿಲ್ಕ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘದಿಂದ ಸೆ.19 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ 5.7 ಅಡಿ ಎತ್ತರವಿದ್ದು, ಸುಮಾರು 150 ಕೆಜಿ ತೂಕ ಹೊಂದಿದೆ. ಮುಖವೊಂದನ್ನು ಬಿಟ್ಟು ಇನ್ನುಳಿದ ಎಲ್ಲ ಭಾಗವೂ ಸಹ ಅಮೇರಿಕನ್ ಡೈಮಂಡ್ ಹರಳು, ನವರತ್ನ ಹರಳುಗಳಿಂದ ಗಣೇಶ ಮೂರ್ತಿಯನ್ನು ನಿರ್ಮಿಸಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಸ್ವಸ್ತಿಕ ಯುವಕರ ಸಂಘ ಅಮೇರಿಕನ್ ಡೈಮಂಡ್ ಹಾಗೂ ಪಂಚ ರತ್ನ ಹರಳುಗಳಿಂದ ಅಲಕೃಂತ ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಿಕೊಂಡು ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಾಪಿಸುವ ಮೂಲಕ 7 ದಿನಗಳವರೆಗೆ ಭಕ್ತಿಪೂರ್ವಕ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಮಾರು 60 ಸಾವಿರಕ್ಕೂ ಹೆಚ್ಚಿನ ಅಮೇರಿಕನ್ ಡೈಮಂಡ ಹಾಗೂ ನವರತ್ನ ಹರಳುಗಳಿಂದ
ಸಂಪತ್ಭರಿತ ಗಣೇಶ ಮೂರ್ತಿ ನಿರ್ಮಿಸಿ ಪ್ರತಿಷ್ಠಾಪನೆಗೆ ಮುಂದಾಗಿರುವುದು ವಿಶೇಷ ವಾಗಿದೆ. ಶುಕ್ರವಾರ ನಗರದಿಂದ ರೈಲಿನ ಮೂಲಕ ಗಣಪನ ಮೂರ್ತಿ ಬೆಂಗಳೂರಿಗೆ ತೆರಳಿದೆ.

Related Articles

Leave a Reply

Your email address will not be published. Required fields are marked *