ಸ್ಥಳೀಯ ಸುದ್ದಿ
ಧಾರವಾಡ ಜಿಲ್ಲೆಯಲ್ಲಿ ಹೇಳುವವರು-ಕೇಳುವವರು ಯಾರು ಇಲ್ಲಾ- ಮಾಜಿ ಶಾಸಕ ಅಮೃತ ದೇಸಾಯಿ.
ಧಾರವಾಡ
ಬಿಜೆಪಿ ಮಾಜಿ ಶಾಸಕ ಅಮೃತ ದೇಸಾಯಿ ಅವರಿಂದ ಹಾಲಿ ಕಾಂಗ್ರೆಸನ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ರಾಜಕೀಯ ಜಿದ್ದಾಜಿದ್ದಿನ ಮೂಲಕ ಟಾಂಗ್ ಕೊಡುವುದು ಶುರುವಾಗಿದೆ.
ರೈತ ವಿರೋಧಿ ಕಾಂಗ್ರೆಸ ಸರ್ಕಾರದ ವಿರುದ್ಧ ಮಾಜಿ ಶಾಸಕ ಅಮೃತ ದೇಸಾಯಿ ಅವರು ಇಂದು ಬೃಹತ್ ಪ್ರತಿಭಟನೆ ನಡೆಸಿದ್ರು.
ಧಾರವಾಡ ಗ್ರಾಮೀಣ ಕ್ಷೇತ್ರ ಜಿಪಿಎ ಆಗಿದೆ.ಧಾರವಾಡ ಜಿಲ್ಲೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲಾ.
ಹೊರದೇಶದಲ್ಲಿ ಇದ್ದುಕೊಂಡು, ಜಿಪಿಎ ಮಾಡಿಸ್ತಾರಲ್ಲಾ ಹಂಗೆ ಆಗಿದೆ ಧಾರವಾಡ ಜಿಲ್ಲೆಯ ಪರಿಸ್ಥಿತಿ ಎಂದ ಬಿಜೆಪಿ ಮಾಜಿ ಶಾಸಕ ಅಮೃತ ದೇಸಾಯಿ ವಿನಯ ಕುಲಕರ್ಣಿ ಅವರಿಗೆ ಟಾಂಗ್ ಕೊಟ್ಟರು.ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ರೈತರ ಬಗ್ಗೆ ಕಾಳಜಿವಹಿಸಬೇಕಿದೆ ಎಂದರು.
ರಾಜ್ಯಕ್ಕೆ ಮಳೆಯಾಗಬೇಕಾದ್ರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇರಬೇಕು. ರಾಜ್ಯಕ್ಕೆ ಬರಗಾಲ ಬೇಕೆಂದ್ರೆ ಸಿದ್ದರಾಮಯ್ಯಾ ಇರಬೇಕು ಅಂತಾರೆ ಅಂತಾ ಸಿಎಂ ಸಿದ್ದರಾಮಯ್ಯಾ ಬಗ್ಗೆ ಮಾಜಿ ಶಾಸಕ ವ್ಯಂಗವಾಡಿದ್ರು.