ಕರ್ತವ್ಯನಿರತ ಚಾಲಕನ ಮೇಲೆ ಹರಿದ ಲಾರಿ:ಸ್ಥಳದಲ್ಲೇ ನದಾಫ್ ಸಾವು!
powercity news:
ಹುಬ್ಬಳ್ಳಿ : ಮಾರಾಟ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಲಾರಿಯೊಂದು ತೆರಿಗೆ ಅಧಿಕಾರಿಗಳ ವಾಹನ ಚಾಲಕನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿಯ ರಿಂಗ್ ರೊಡ್ ನಲ್ಲಿ ಇಂದು ನಸುಕಿನ ಜಾವ ನಡೆದಿದೆ.
ಮೃತ ಚಾಲಕನನ್ನು ನವನಗರದ ಅಮರಗೋಳ ನಿವಾಸಿ ಮಹ್ಮದ ರಫಿಕ ನದಾಫ (32) ಎಂದು ಗುರುತಿಸಲಾಗಿದೆ.
ಎಂದಿನಂತೆ ರಾತ್ರಿಪಾಳೆಯದಲ್ಲಿ ಕರ್ತವ್ಯ ನಿರತರಾಗಿದ್ದ ಅಧಿಕಾರಿಗಳು ಅದಾಗಲೇ ಸಂಶಯಾಸ್ಪದ ಲಾರಿಯೊಂದನ್ನು ತಡೆದು ದಾಖಲೆಗಳನ್ನು ಪರಿಸಿಲಿಸುತ್ತಿದ್ದರು.
ಇ ವೇಳೆ ತೆರಿಗೆ ಅಧಿಕಾರಿಗಳು ಬಳಸುತ್ತಿದ್ದ ಟಾಟಾ ಸುಮೋ ವಾಹನದ ಚಾಲಕ ರಫಿಕ ನದಾಫ್ ವಾಹನದ ಬಳಿ ನಿಂತಿರುವ ವೇಳೆಗೆ ಹಿಂದಿನಿಂದ ಬಂದ ಕೋಕ್(ಇದ್ದಿಲು ಪುಡಿ) ತುಂಬಿದ್ದ ಲಾರಿ ಎಕಾ ಏಕಿ ಮೈಮೇಲೆ ಬಂದಿದೆ.ಆಗ ರಫಿಕ ನದಾಫ್ ಅಪಘಾತದಿಂದ ತಪ್ಪಿಸಿಕೊಳ್ಳಲು ಹಿಂದೆ ಸರಿದರು ಸಹ ಲಾರಿ ಆತನ ಮೇಲೆಯೇ ಹರಿದಿದೆ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತನು ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದು ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಕುಟುಂಬಕ್ಕೆ ದಿಕ್ಕೆ ದೋಚದಂತಾಗಿದೆ.
ಘಟನೆಗೆ ತೀವ್ರ ಬೇಸರ ವ್ಯಕ್ತ ಪಡಿಸಿರುವ ಮಾರಾಟ ತೆರಿಗೆ ಅಧಿಕಾರಿಗಳು ಚಾಲಕನ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಶವಸಂಸ್ಕಾರಕ್ಕೆ ಬೇಕಾದ ಎಲ್ಲ ಏರ್ಪಾಡುಗಳನ್ನು ಸಹ ತಮ್ಮ ಸ್ವಂತ ಖರ್ಚಿನಲ್ಲಿ ಮಾಡುವುದಾಗಿ ನಿರ್ಧರಿಸಿದ್ದು ಮೃತನ ಕುಟುಂಬಕ್ಕೆ ವಯಕ್ತಿಕ ವಾಗಿ ಸಹಾಯ ಮಾಡುವ ಎಲ್ಲ ಭರವಸೆಗಳನ್ನು ಅಧಿಕಾರಿಗಳು ಕುಟುಂಬಸ್ಥರಿಗೆ ನೀಡಿ ಮಾನವಿಯತೆ ಮೆರೆದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಸಹಾಯಕ ಪೊಲಿಸ್ ಆಯುಕ್ತ ವಿನೋದ ಮುಕ್ತೇದಾರ ಘಟನೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು ತಪ್ಪಿಸಿ ಕೊಂಡಿರುವ ಲಾರಿಚಲಕನಿಗೆ ಶೋಧಕಾರ್ಯ ಮುಂದುವರೆಸಿದ್ದಾರೆ.