ಸ್ಥಳೀಯ ಸುದ್ದಿ
ಅಗ್ನಿವೀರ ಯೋಧನಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಮೊದಲ ಪರೆಡ ಕಮಾಂಡರ್ ಧಾರವಾಡ ಜಿಲ್ಲೆಯ ಯೋಧ ಕಾಸೀಮ ಕುತುಬುದ್ದೀನ ಭಾವಿಮನಿ
ಧಾರವಾಡ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಗ್ನಿವೀರ ಯೋಧನಾಗಿ ನೇಮಕಾತಿ ಆಗಿರುವ ಧಾರವಾಡ ಜಿಲ್ಲೆಯ ಯೋಧನೊಬ್ಬ ಕರ್ನಾಟಕ್ಕೆ ಕೀರ್ತಿ ತಂದಿದ್ದಾನೆ.
ಉತ್ತರಪ್ರದೇಶದಲ್ಲಿ ನಡೆದ ಅಗ್ನಿವೀರ ಯೋಧರ ಪರೇಡನಲ್ಲಿ , ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಅಗ್ನಿವೀರ ಕಾಸೀಮ ಭಾವಿಮನಿ, ಯಶಸ್ವಿಯಾಗಿ ಶಿಸ್ತು ಬದ್ದವಾಗಿ ಪರೇಡ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಇವರು ಧಾರವಾಡ ತಾಲೂಕಿನ ಯಾದವಾಡ ಗ್ರಾಮದವರು ಅನ್ನೋದು ಧಾರವಾಡ ಜಿಲ್ಲೆಯ ಹೆಮ್ಮೆ.