ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮಂಜಣ್ಣ ಕಡೆಮನಿ.
ಕುಕನೂರು ತಾಲೂಕಿನ ಪ್ರಮುಖ ನಾಯಕರು ಹಾಗೂ ಗುತ್ತೇದಾರರಾದ ಮಂಜಣ್ಣ ಕಡೆಮನಿ ಅವರು ವೃದ್ರಾಶ್ರಮದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದರ ಮೂಲಕ ಸರಳತೆಯನ್ನು ಮೆರೆಯುವುದರೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣ ಗೊಳಿಸಿದರು.
ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ವಿದ್ಯಾಲಯದ ಆವರಣದಲ್ಲಿರುವ ವೃದ್ಧಾಶ್ರಮದಲ್ಲಿ ವಾಸವಾಗಿರುವ ವೃದ್ಧರೊಂದಿಗೆ ತಮ್ಮ 54 ನೇ ಹುಟ್ಟು ಹಬ್ಬವನ್ನು ಆಡಂಬರದಿಂದ ಮಾಡದೆ ವಿಶೇಷವಾದ ಸಿಹಿ ಭೋಜನವನ್ನು ತಯಾರಿಸಿ ಆಶ್ರಮದಲ್ಲಿ ವಾಸವಾಗಿರುವ ಜನರೊಂದಿಗೆ ಸೇರಿಕೊಂಡು ಕೇಕ್ ಕತ್ತರಿಸಿ ತಮ್ಮ ಹಿಂಬಾಲಕರು ಹಾಗೂ ಅನುಯಾಯಿಗಳ ಜೊತೆ ವೃದ್ಧಾಶ್ರಮದಲ್ಲಿರುವ ಎಲ್ಲರಿಗೂ ತಾವು ಮಾಡಿಸಿದ ಅಡುಗೆಯನ್ನು ಬಡಿಸಿ ಅವರ ಊಟ ಆದನಂತರ ತಾವು ಸಹ ಅಲ್ಲಿಗೆ ಆಹಾರ ಸೇವನೆ ಮಾಡಿ ಸರಳತೆಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ವೇಳೆ ಮಂಜಣ್ಣ ಕಡೆಮನಿ ಮಾತನಾಡುತ್ತಾ ನನ್ನ ಹುಟ್ಟುಹಬ್ಬವನ್ನು ವೃದ್ದಾಶ್ರಮದಲ್ಲಿ ಹಿರಿಯರ ಆಶೀರ್ವಾದದೊಂದಿಗೆ ನನ್ನ ಸ್ನೇಹ ಬಳಗದ ಜೊತೆಗೂಡಿ ಆಚರಿಸಿಕೊಳ್ಳುತ್ತಿರುವುದು ನನಗೆ ಸಂತೋಷ ಉಂಟು ಮಾಡಿದೆ ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಮೇಘರಾಜ್ ಕಕ್ಕಿಹಳ್ಳಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಗಗನ್ ನೋಟಗಾರ, ನಿಂಗಪ್ಪ ಗೋರ್ಲೆಕೊಪ್ಪ, ಮಲಿಯಪ್ಪ ಅಣ್ಣಿಗೇರಿ, ಮಂಜಣ್ಣ ಮ್ಯಾದರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಆರುಬೇರಳಿನ್, ರವಿ ಕುಮಾರ್ ಭಜಂತ್ರಿ, ಮಲ್ಲು ದೊಡ್ಮನಿ, ಬಸವರಾಜ ಬಿನ್ನಾಳ ಮುಂತಾದವರು ಪಾಲ್ಗೊಂಡಿದ್ದರು.