ಕ್ಷೇತ್ರದಿಂದ ಹೊರಗಿದ್ದುಕೊಂಡೆ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಿದ ಸನ್ಮಾನ್ಯ ಶಾಸಕ ವಿನಯ ಕುಲಕರ್ಣಿ
ಸವದತ್ತಿ
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಕ್ಷೇತ್ರದ ಜನತೆಯ ಹಾಗೂ ಅಭಿಮಾನಿಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಸಿ ಧನ್ಯವಾದ ಹೇಳಿದ್ರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಶಾಸಕ ವಿನಯ ಕುಲಕರ್ಣಿ, ಧಾರವಾಡಕ್ಕೆ ಬರಲು ಅನಾನುಕೂಲ ಆಗಿದೆ. ಹೀಗಾಗಿ ಸವದತ್ತಿಯಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ಇಟ್ಟುಕೊಂಡಿದ್ದೇವೆ.
ಕಾರ್ಯಕರ್ತರು ನಮಗೆ ದೊಡ್ಡ ಬಹುಮತ ಕೊಟ್ಟಿದ್ದಾರೆ.
ಅವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೆ.
ಹಿಂದಿನ ಸರ್ಕಾರದ ಭ್ರಷ್ಟಾಚಾರ ನೋಡಿ ನಮಗೆ ಅವಕಾಶ ಕೊಟ್ಟಿದ್ದಾರೆ.
ಹೀಗಾಗಿ ನಮ್ಮ ಮೇಲೆ ಬಹಳ ಜವಾಬ್ದಾರಿ ಇದೆ. ಬಿಜೆಪಿಯವರು ಬಾವಿಯಲ್ಲಿ ಇಳಿದು ಧರಣಿ ಮಾಡಿದ್ದರು.ಮೋಸದಿಂದ ಆಯ್ಕೆಯಾಗಿದ್ದೇವೆ ಎಂದು ಪ್ರತಿಬಿಂಬಿಸಿದ್ದಾರೆ.
ಈಗ ಬಜೆಟ್ನಲ್ಲಿ ಎಲ್ಲ ಗ್ಯಾರಂಟಿಗಳು ಈಡೇರುವ ಬದ್ಧತೆ ಲಭಿಸಿದೆ. ಶಕ್ತಿ ಯೋಜನೆ ಈಗಾಗಲೇ ಜಾರಿ ಮಾಡಿದ್ದೇವೆ. ಈಗ ಮಹಿಳೆಯರಿಗೆ ಹುಮ್ಮಸ್ಸು ಇದೆ. ಹೀಗಾಗಿ ಬಸ್ ದಟ್ಟಣೆ ಹೆಚ್ಚಾಗುತ್ತಿದೆ ಎಂದರು.
ಮಳೆ ಇಲ್ಲ ಹೀಗಾಗಿ ಬಸ್ನಲ್ಲಿ ಗಲಾಟೆ ಆಗುತ್ತಿದೆ. ಆದರೆ ಈಗ ಮಳೆ ಶುರುವಾಗಿದೆ. ಇನ್ನು ಹದಿನೈದು ದಿನಕ್ಕೆ ಬಸಗಳ ದಟ್ಟಣೆ ಕಡಿಮೆ ಆಗುತ್ತದೆ.ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಬೇಡಿಕೆ ವಿಚಾರ, ಅದು ಈಡೇರಲು ಸ್ವಲ್ಪ ವಿಳಂಬ ಆಗಬಹುದು.
ಆದರೆ ಅವರ ಬೇಡಿಕೆ ಈಡೇರಿಸುತ್ತೇವೆ ಎಂದರು.
ನನ್ನ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕುಂಠಿತಗೊಂಡಿವೆ.
ಕ್ಷೇತ್ರಕ್ಕೆ ಬರಲು ಆಗಲಿದ್ದರು ಬೆಂಗಳೂರಿನಲ್ಲಿದ್ದು ಗಮನಿಸಿದ್ದೇವೆ.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಆಗಿದೆ.
ವಿದ್ಯುತ್ ಕೊರತೆಯೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ.
ನೀರು, ವಿದ್ಯುತ್ ಸಮಸ್ಯೆ ಶೀಘ್ರ ಪರಿಹರಿಸುತ್ತೇವೆ.
ಧಾರವಾಡ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಚಾರದ ಬಗ್ಗೆ ಮಾತನಾಡಿದ ವಿನಯ ಕುಲಕರ್ಣಿ,
ಧಾರವಾಡ ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ಸಿಗದ ಹಿನ್ನೆಲೆ. ಇದರ ಹಿಂದೆ ಹಲವಾರು ಷಡ್ಯಂತ್ರ ಇವೆ.
ಅದನ್ನೆಲ್ಲ ನೋಡಿದಾಗ ಬಹಳ ನೋವು ಅನಿಸುತ್ತದೆ.
ಇನ್ನೂ ಸಹ ನನಗೆ ಕೋರ್ಟ್ ಮೇಲೆ ಭರವಸೆ ಇದೆ.
ಹೈಕೋರ್ಟ್ಗೆ ಅಫೀಲು ಹೋಗುತ್ತೇನೆ ಎಂದರು.