ಸ್ಥಳೀಯ ಸುದ್ದಿ

ಸಮಾಜ ಸೇವಕರ ಸಾಮಾಜಿಕ ಕಾರ್ಯ ಮಾದರಿಯಾಗಿದೆ- ಎ. ಎಂ ಹೊರಪೇಟ

ನವಲಗುಂದ

ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಣೆ ಮಾಡುವುದರ ಮೂಲಕ ಸಮಾಜ ಸೇವಕ ಮಾಬುಸಾಬ ಯರಗುಪ್ಪಿಯವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮುಖ್ಯ ಶಿಕ್ಷಕ ಎ.ಎಂ.ಹೊರಪೇಟ
ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ನಾಗನೂರ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಉಚಿತ ಬಟ್ಟೆ ಹಾಗೂ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇವತ್ತು ನಾಗನೂರ ಗ್ರಾಮದ ಸಮಸ್ತ ಗುರು ಬಳಗ ಈ ಶಾಲೆಯ ಅಭಿವೃದ್ಧಿಗೆ ಬಹಳ ಸಹಕಾರ ನೀಡಿದ್ದು ಅದನ್ನು ಎಂದು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಶಿಕ್ಷಣ ಪ್ರೇಮಿ ಶೌಕತ್ಅಲಿ ಲಂಬೂನವರ ಮಾತನಾಡಿ
ಇಂದು ಸರ್ಕಾರಿ ಶಾಲೆಗಳು ತಾಲೂಕಿನಾದ್ಯಂತ ಕ್ರೀಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿವೆ, ಸಾಮಾಜಿಕ ಕಳ-ಕಳಿಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗೆ ಕಾರಣಿಕರ್ತರಾಗಿರುವ ಮಾಬುಸಾಬರವರು ಈ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ ನೀಡಿ ಉದಾರ ಮನೋಭಾವವನ್ನು ಮೆರೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮೂಲ ಶಾಲೆಗೆ ಬಿಡುಗಡೆ ಹೊಂದಿದ ಎಲ್.ವಾಯ್ ಮೂಲಿಮನಿ, ಝೆಡ್.ಎ ಫಾರುಖಿಯವರಿಗೆ ಸನ್ಮಾನ ಮಾಡಲಾಯಿತು, ಯಾದವಾಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಡಿವೆಪ್ಪ ದಿಂಡಿಲಕೊಪ್ಪ, ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ಮಲ್ಲಿಕಾರ್ಜುನ ಹುಬ್ಬಳ್ಳಿ, ಸಿ.ಆರ್.ಸಿ ಎಚ್.ಎಂ ಗುರಾಣಿ, ಎಸ್.ಡಿ. ಎಂ.ಸಿ ಅಧ್ಯಕ್ಷರಾದ ಫರವಿನಭಾನು, ಲಂಬೂನವರ, ಶಿಕ್ಷಕರಾದ ಎಲ್.ವಾಯ್ ಮೂಲಿಮನಿ, ಝೆಡ್.ಎ. ಫಾರುಖಿ,
ಸಹ ಶಿಕ್ಷಕಿಯರಾದ ರಜಿಯಾ ನದಾಫ, ರಜಿಯಾ ಭಾಗವಾನ, ಎಸ್.ಡಿ.ಎಂ.ಸಿ ಸದಸ್ಯ ರಾಯೇಸಾಬ ಮುಜಾವರ, ಪ್ರಭು ಸೂರಪ್ಪನವರ, ಮಾರುತಿ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *