ಸ್ಥಳೀಯ ಸುದ್ದಿ

ರಾಷ್ಟ್ರಪತಿಗೆ ಮನವಿ‌ ಸಲ್ಲಿಸಿದ ಕಾಂಗ್ರೆಸ ನಾಯಕರು

ಬೆಂಗಳೂರು

10 kg ಅಕ್ಕಿಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಇದಕ್ಕಾಗಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ನಾನಾ ಭಾಗದಲ್ಲಿಯೂ ಪ್ರತಿಭಟನೆಗಳು ನಡೆದವು.

ಧಾರವಾಡದ ಜಿಲ್ಲಾಧಿಕಾರಿಗಳವರ ಕಛೇರಿ ಎದುರಿಗೆ ಧಾರವಾಡ ಜಿಲ್ಲಾ ಕಾಂಗ್ರೆಸ ವತಿಯಿಂದ,ಕೇಂದ್ರ ಸರ್ಕಾರದ ವಿರುಧ್ಧ ಪ್ರತಿಭಟನೆ ನಡೆಸಲಾಯಿತು.

ಮಾನ್ಯ ಜಿಲ್ಲಾಧಿಕಾರಿಗಳವರ ಮುಖಾಂತರ ಮನವಿ ಸಲ್ಲಿಸಿ, ಡಿಸಿ ಕಛೇರಿ ಎದುರಿಗೆ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಒಲೆ ಹೂಡಿ ಅನ್ನ ಬೇಯಿಸಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಉಸ್ತವಾರಿ ಸಚಿವರಾದ ಸಂತೋಷ ಲಾಡವರು ಮಾತನಾಡಿ,
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 10ಕೆಜಿ ಅಕ್ಕಿಯ ಭರವಸೆಯನ್ನು ನೀಡಿದ್ದು,ಈಗ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ,ಕರ್ನಾಟಕ ಕಾಂಗ್ರೆಸ್ ಸರ್ಕಾರವು ,ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡು ಸಾಕಾಗುವಷ್ಟು ಅಕ್ಕಿಯನ್ನು ನೀಡಬೇಕು ಅದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದು ಮನವಿ ಮಾಡಿದರೂ ಸ್ಪಂದಿಸದೇ,ಕೇಂದ್ರದ ಆಧಿನದಲ್ಲಿರುವ ಕೆ. ಎಫ್.ಸಿ. ಐ ಯನ್ನು ಬಳಸಿಕೊಂಡು ರಾಜ್ಯಕ್ಕೆ ಅಕ್ಕಿ ನೀಡದಂತೆ ತಾಕೀತು ಮಾಡಿದ್ದು ರಾಜ್ಯದ ಬಡವರ ಹೊಟ್ಟೆಯ ಮೇಲೆ ಬರೆ ಎಳೆಂದಂತಾಗಿದೆ.

ಈ ಕೃತ್ಯವು ರಾಜಕೀಯ ದುರುದ್ದೇಶ ಹೊಂದಿದ್ದು ತಾವುಗಳು ಮದ್ಯಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ತಮ್ಮ ಗಮನಕ್ಕೆ ತರುವ ಉದ್ದೇಶದಿಂದ ಇಂದು ಸಾಂಕೇತಿಕ ಧರಣಿ ಮಾಡಿದ್ದು ಮುಂದಿನ ದಿನ ಮಾನಗಳಲ್ಲಿ ಉಗ್ರ ಹೊಇರಾಟ ಮಾಡುವುದು ಅನಿವಾರ್ಯ ವಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರುಗಳಾದ ಅಲ್ತಾಫ ಹಳ್ಳೂರ,ಅನಿಲಕುಮಾರ ಪಾಟೀಲ,ಮಾಜಿ ಸಚಿವರಾದ ಹಿಂಡಸಗೇರಿ,ಸದಾನಂದ ಡಂಗನವರ,ಅರವಿಂದ ಏಗನಗೌಡರ,ಆನಂದ ಜಾಧವ,ವಸಂತ ಅರ್ಕಾಚಾರ,ದೀಪಾ ಗೌರಿ,ದೀಪಕ ಚಿಂಚೂರಿ,ಬಸವರಾಜ ಗುರಿಕಾರ,ಚನಬಸಪ್ಪ ಮಟ್ಟಿ,ಅಶೋಕ ಸೂರ್ಯವಂಶಿ,ಇಬ್ರಾಹಿಂ ಗುಡಸಲಮನಿ,ಮಂಜುನಾಥ ಭೀಮಕ್ಕನವರ,ಕೆಂಚನಗೌಡರ,ಸಮೀರ ಗುಡಸಲಮನಿ,ಅರ್ಜುನ‌ ಪತ್ರನ್ನವರ ,ಮೋಹನ‌ ಹಿರೇಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *