ಪಶ್ಚಿಮದಲ್ಲಿ ಮುಂದು ವರಿದ ಕಾಂಗ್ರೆಸ್ ಕಗ್ಗಂಟು: “ಕೈ”ಅಧ್ಯಕ್ಷ ಟೋಟಲ್ ಸೈಲೆಂಟು!
power city news
ಹುಬ್ಬಳ್ಳಿ
2023ರ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟಿಕೇಟ್ ವಂಚಿತರ ಪಕ್ಷ ಬದಲಾಣೆ,ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ಸ್ವ ಪಕ್ಷಕ್ಕೆ ಮುಳುವಾಗಿರುವ ಪ್ರಸಂಗಗಳು ರಾಜ್ಯಾದ್ಯಂತ ಸಾಮಾನ್ಯವಾಗಿವೆ.
ಅದರಂತೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ-74ರ ಮತ ಕ್ಷೇತ್ರಕ್ಕೂ ಕೂಡ ಬಂಡಾಯ,ಪಕ್ಷೇತರ, ಮುನಿಸು, ಆಂತರಿಕ ಭಿನ್ನಾಭಿಪ್ರಾಯ, ಕಡೆಗೆ ಸೊಲಿಸು ಎನ್ನುವ ಭಯಾನಕ ರೋಗದಂತೆ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.
ಇ ಹಿಂದೆ ಕರೋನ ಕಾಲದಲ್ಲಿ ನಾಗರಾಜ್ ಗೌರಿ ದಂಪತಿಗಳು ಪಶ್ಚಿಮ ಕ್ಷೇತ್ರದಲ್ಲಿನ ಬಡವರ ಪರ ಧ್ವನಿಯಾಗಿ.ಹಸಿವಿನಿಂದ ಬಳಲಿದ್ದ ಕುಟುಂಬ ಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಹಾಯ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಪಶ್ಚಿಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಕಷ್ಟು ದುಡಿದಿರುವ ನಿದರ್ಶನಗಳು ಸಾಕಷ್ಟಿದೆ.
2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪಶ್ಚಿಮ 74ರ ಮತ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇಸ್ಮಾಯಿಲ್ ಟಮಾಟಗರ ಬಿಜೆಪಿಯ ಹಾಲಿ ಶಾಸಕ ಅರವಿಂದ ಬೆಲ್ಲದ ವಿರುದ್ಧ ಗೆಲ್ಲಲು ಸಾಧ್ಯವಾಗದೆ ಸುಮಾರು 45 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋತಿದ್ದರು.
ಆದ್ರೆ ಈಗಿನ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಪಕ್ಷದಿಂದ ಪಶ್ಚಿಮ ಮತ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ನಾಗರಾಜ್ ಗೌರಿ,ದೀಪಕ್ ಚಿಂಚೂರೆ,ಕಿರ್ತೀ ಮೋರೆ,ನೀರಲಕೇರಿ ಹಾಗೂ ಬಸವರಾಜ್ ಮಲಕಾರಿ ಸೇರಿದಂತೆ ಒಟ್ಟು ಆರೇಳು ಕಾಂಗ್ರೆಸ್ ಪಕ್ಷದ ಮುಖಂಡರು ಟಿಕೇಟ್ ಪೈಪೋಟಿಯಲ್ಲಿದ್ದರು.
ಆದ್ರೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದ್ದು ಮಾತ್ರ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದೀಪಕ್ ಚಿಂಚೂರೆ ಯವರಿಗೆ.
ಚಿಂಚೋರೆಗೆ ಟಿಕೇಟ್ ಘೋಷಣೆಯ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದ ಕಾರಣ ಮಲಕಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸವಾಲೆಸೆದರೆ ಇತ್ತ ನಾಗರಾಜ್ ಗೌರಿ ಮೌನಕ್ಕೆ ಶರಣಾಗ್ತಾರೆ ಮತ್ತು ಇನ್ನುಳಿದವರು ಮಾತ್ರ ಒಗ್ಗಟ್ಟು ಪ್ರದರ್ಶಿಸದೆ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೂರೆಯಿಂದ ಅಂತರ ಕಾಯ್ದು ಕೊಳ್ತಾರೆ.
ಕ್ಷೇತ್ರದ 24 ವಾರ್ಡ್ ಗಳ ಪೈಕಿ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಟಾಚಾರಕ್ಕೆ ಅಭ್ಯರ್ಥಿಯ ಪರ ಕ್ಷೇತ್ರದಲ್ಲಿ ತಿರುಗುತ್ತಿದ್ದಾರಂತೆ ಕೈ ಕಾರ್ಯಕರ್ತರು. ಹೀಗಿರುವಾಗ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೂರೆಯ ಪರವಾಗಿ ಮತದಾರರ ಗಮನ ಸೆಳೆಯುವಂತಹ ಪ್ರಚಾರಗಳು ಮಾತ್ರ ಇಲ್ಲಿಯವೆರಗೂ ನಡೆದಿಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್ ನ ಕಾರ್ಯಕರ್ತರು. ಆದರೂ ಕೂಡ ದೀಪಕ್ ಚಿಂಚೂರೆಯವರ ಗೆಲುವಿನ ಲೆಕ್ಕಾಚಾರ ಮಾತ್ರ ಬಿಸಿ ತುಪ್ಪದಂತಾಗಿದೆ.
ಹಾಗದ್ರೆ ಪಶ್ಚಿಮ ಕ್ಷೇತ್ರವನ್ನು ಬಿಜೆಪಿಯ ಭದ್ರ ಕೋಟೆಯಾಗಿಸಿರುವ ಅರವಿಂದ ಬೆಲ್ಲದ ವಿರುದ್ಧದ ಗೆಲವು ಕಾಂಗ್ರೆಸ್ಸಿಗರಿಗೆ ಹಗಲು ಕನಸೆ ಸರಿ.