ಸ್ಥಳೀಯ ಸುದ್ದಿ

ಬಿಜೆಪಿ‌ ಪ್ರಭಾವಿ ನಾಯಕನಿಂದ ಪಕ್ಷಕ್ಕೆ ರಾಜಿನಾಮೆ

ಧಾರವಾಡ

ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ
ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬೊಮ್ಮಾಯಿ ವಿರುದ್ಧ ಆರೋಪ ಮಾಡಿ, ಬಿಜೆಪಿ ನಾಯಕರು ಜೈನ ಸಮುದಾಯಕ್ಕೆ ಅವಮಾನ ಮಾಡಿದಂತೆ‌ ಆಗಿದ್ದು, ಇದಕ್ಕೆಲ್ಲಾ ನೇರ ಕಾರಣ ಬಸವರಾಜ ಬೊಮ್ಮಾಯಿ‌ ಎಂದು‌ ಬೇಸರ ವ್ಯಕ್ತಪಡಿಸಿದ್ರು.

ಧಾರವಾಡ ಜಿಲ್ಲೆಯಲ್ಲಿ ಧಾರವಾಡ ಗ್ರಾಮೀಣ 71 ಕ್ಷೇತ್ರದ ಆಕಾಂಕ್ಷಿಯಾಗಿದ್ದ ತವನ್ನಪ್ಪ ಅಷ್ಟಗಿ ಅವರು ಜಿಲ್ಲೆಯಲ್ಲಿ ಜೈನ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ.

ಇತ್ತೀಚಿಗೆ ಬಯಲು ಸೀಮೆ ಅಭಿವೃದ್ಧಿ ಮಂಡಳಿ‌ ಅಧ್ಯಕ್ಷರಾಗಿದ್ದ ಅವರು ಶಾಸಕರಾಗುವ ಇಚ್ಚೆ ಹೊಂದಿದ್ದರು.

ಸುದ್ದಿಗೋಷ್ಠಿ ನಡೆಸಿದ ಬಿಜೆಪಿ‌ ಮುಖಂಡ ತವನ್ನಪ್ಪ ಅಷ್ಟಗಿ ಧಾರವಾಡ ಗ್ರಾಮೀಣ ಟಿಕೆಟ್ ಆಕಾಂಕ್ಷಿಯಾಗಿದ್ದ ನನಗೆ ತುಂಬಾ ನೋವಾಗಿದ್ದು,
ನನ್ನ ಟಿಕೆಟ್ ತಪ್ಪಲು ಬೊಮ್ಮಾಯಿ ಕಾರಣ, ಹೀಗಾಗಿ ನಾನು ಕ್ಷೇತ್ರದ ಜನರೊಂದಿಗೆ ಚರ್ಚೆ ‌ನಡೆಸಿ ಮುಂದಿನ‌ ತೀರ್ಮಾನ ಕೈಗೊಳ್ಳುವೆ ಎಂದರು.‌

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮೀತ್ ಶಾ ಮನವೊಲಿಸಿದ್ರೂ ಕೂಡ ನಾನು ಪಕ್ಷಕ್ಕೆ ಮತ್ತೆ ಸೇರುವ ಪ್ರಶ್ನೆಯೇ ಇಲ್ಲ ಎಂದರು.

ಹಾಲಿ‌ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು, ಅವರ ಸೋಲಿಗೆ ನಾವು ಕಾರಣರಾಗಲು ಬಯಸುವುದಿಲ್ಲಾ.

2013 ರಿಂದ 1 ದಶಕದವರೆಗೂ ಬಿಜೆಪಿಯಲ್ಲಿದ್ದು, ಅಮೃತ‌ ದೇಸಾಯಿ ಅವರ ಬೆಳವಣಿಗೆಗೆ ದುಡಿದಿದ್ದೇವೆ.

ಆದ್ರೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಾವು ಜೈನ ಸಮಾಜದವರು ಎನ್ನುವ ಒಂದೇ ಕಾರಣಕ್ಕೆ ತಪ್ಪಿಸುವುದು ಇದು ಸಾಮಾಜಿಕ ನ್ಯಾಯದ ವಿರುದ್ಧ ಅಲ್ಲವೇ ಎಂದು ಅಷ್ಟಗಿ ಬಿಜೆಪಿ‌ ವರಿಷ್ಟರಿಗೆ ಪ್ರಶ್ನಿಸಿದ್ರು.

ಜೈನ ಸಮುದಾಯಕ್ಕೆ ರಾಜ್ಯದಲ್ಲಿ 2 ಟಿಕೆಟ್ ಕೊಡಬೇಕಿತ್ತು. ಅದರಲ್ಲೂ ಕೆವಲ ಬೆಳಗಾವಿ ಜಿಲ್ಲೆಗೆ ಒಂದೇ ಟಿಕೆಟ್ ಕೊಟಿದ್ದಾರೆ.

ನಾನು mlc ಆಗಲು ಹಲವಾರು ಬಾರಿ ಪ್ರಯತ್ನ ಪಟ್ಟೆ ಆದ್ರೆ 3 ವರ್ಷದ ಬಳಿಕೆ ಕೊನೆ ಕ್ಷಣದಲ್ಲಿ ನಿಗಮ ಮಂಡಳಿ ಸ್ಥಾನ ಕೊಟ್ಟು ತಣ್ಣಗೆ ಮಾಡುವ ಕೆಲಸ ನಡೆಯಿತು.

ಈ ಬಾರಿ ಚುನಾವಣೆಯಲ್ಲಿ ಹಾಲಿ ಶಾಸಕ ಅಮೃತ ದೇಸಾಯಿ ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ತವನ್ನಪ್ಪ ಅಷ್ಟಗಿ ತಿಳಿಸಿದ್ರು.

ತಮಗೆ ಮಾತು‌ ಕೊಟ್ಟು ಹಿಂದೆ ಸರಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಗ್ಗೆಯೂ ತವನ್ನಪ್ಪ‌ ಅಷ್ಟಗಿ ಬೇಸರ ವ್ಯಕ್ತಪಡಿಸಿದ್ರು.

ನಾನು ಈ ಕ್ಷಣದಿಂದ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ

ಪಕ್ಷ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು

ಆ ಅಧ್ಯಕ್ಷ ಸ್ಥಾನ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ.

ಮೋದಿ ಹಾಗೂ ಅಮೀತ ಶಾ ಬಂದೂ ಕರೆದ್ರೂ ಬಿಜೆಪಿ ಸೇರುವ ಪ್ರಶ್ನೆ ಇಲ್ಲಾ

Related Articles

Leave a Reply

Your email address will not be published. Required fields are marked *