ನಾಗರಾಜ್ ಛೆಬ್ಬಿ ಬಿಜೆಪಿಗೆ ಸೆರ್ಪಡೆ : ಡೋಂಟ್ ಕೇರ್ ಎಂದ ಲಾಡ್!
Powercity news ಸುದ್ದಿ: ನಾಗರಾಜ್ ಛಬ್ಬಿ ಕೈ ಪಕ್ಷದಿಂದ ಹೊರಬಂದು ಸಂತೋಷ್ ಲಾಡ್ ಗೆ ನೇರವಾಗಿ ಸವಾಲ್ ಎಸೆಯುವುದರ ಮೂಲಕ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನೂ ರಾಜಕೀಯ ಕಿಚ್ಚು ಹಚ್ಚಿದಂತಾಗಿದೆ.
ಇದೂವರೆಗೂ ಇದೇಲ್ಲ ಒಂದೆ ಪಕ್ಷದ ಇಬ್ಬರು ಘಟಾನುಘಟಿ ನಾಯಕರ ನಡುವೆ ಮೂಡಿ ಬಂದಿಂದ್ದ ವೈಮನಸ್ಸು ಇಂದಲ್ಲ ನಾಳೆ ಸರಿಯಾಗಬಹುದು ಎಂದುಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದು ನಡೆದ ರಾಜಕೀಯ ಬೆಳವಣಿಗೆಯು ಎರಡು ನಾಯಕರ ಹಿಂಬಾಲಕರ ಮನದಲ್ಲಿ ಮಾತ್ರ ಭಾರಿ ಸ್ಫೋಟಕ ವಾದಂತೆ ಭಾಸವಾಗುತ್ತಿರುವ ಹಾಗಿದೆ.
ಕೈ ಪಕ್ಷದಲ್ಲಿ ಇಬ್ಬರು ನಾಯಕರ ಆಂತರಿಕ ಭಿನ್ನಾಭಿಪ್ರಾಯ ವಾತಾವರಣ ಇಂದಲ್ಲ ನಾಳೆ ಸರಿಯಾಗುತ್ತೆ ಎನ್ನುವುದರ ನಡುವೆ ಸತತ ಒಂದುವರೆ ವರೆ ದಶಕದಿಂದಲೂ ಕಲಘಟಗಿ ವಿಧಾನ ಸಭಾ ಕ್ಷೇತ್ರಕ್ಕೆ ಕೈ ಪಕ್ಷದ ಆಕಾಂಕ್ಷಿಯಾಗಿದ್ದ ನಾಗರಾಜ್ ಛೆಬ್ಬಿಯವರು ಟಿಕೇಟ್ ತಪ್ಪಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ,ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಬಿಜೆಪಿ ಪಕ್ಷದ ರಾಜ್ಯಾದ್ಯಕ್ಷ ನಳಿನಕುಮಾರ ಕಟೀಲ,ಗೊವಿಂದ ಕಾರ್ಜೊಳ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಮುಖಮಾಡುವುದರ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ.
ನಾಗರಾಜ್ ಛಬ್ಬಿ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ನಾಗರಾಜ್ ಛೆಬ್ಬಿ.
ಇನ್ನೂ ಪಕ್ಷದಲ್ಲಿ ಅವರ ಸೇವೆಯನ್ನು ಕಡೆಗಣಿಸಿದ ಮನೋಭಾವದ ಹಿನ್ನೆಲೆಯಲ್ಲೋ ಅಥವಾ ಸಂತೋಷ ಲಾಡ್ ನಾಗರಾಜ್ ಛೆಬ್ಬಿಯ ನಡುವೆ ಇರುವ ವೈಮನಸ್ಸಿನ ರಾಜಕೀಯಕ್ಕೆ ಇಂದು ನಾಗರಾಜ್ ಛೆಬ್ಬಿ ಕಾಂಗ್ರೆಸ್ ನಿಂದ ಹೊರ ಬಂದರೆ? ಎನ್ನುವುದು ಕೂಡ ಅಷ್ಟೇ ನಿಗೂಢವಾಗಿದೆ.
ಒಂದು ವೇಳೆ ನಾಗರಾಜ್ ಛೆಬ್ಬಿಯವರನ್ನು ಬಿಜೆಪಿ ಪಕ್ಷದಿಂದ ಕಲಘಟಗಿ ಮತ ಕ್ಷೇತ್ರಕ್ಕೆ ಆಭ್ಯರ್ಥಿಯಾಗಿಸಿ ಕಣದಲ್ಲಿ ಇಳಿಸಿದರೆ ಇದೂವರೆಗೂ ಸುಲಭವಾಗಿದ್ದ ಸಂತೋಷ್ ಲಾಡ್ ಗೆಲುವಿನ ದಾರಿ ಮತ್ತಷ್ಟು ಕಠಿಣವಾಗುವುದಂತು ಅಷ್ಟೇ ಸತ್ಯ ಎನ್ನಲಾಗಿದೆ.
ಆದರೆ ಇಂದು ಬಿಜೆಪಿ ಕೈಹಿಡಿದಿರುವ ಛೆಬ್ಬಿ ಕೇವಲ ತಾವೊಬ್ಬರೆ ಬಿಜೆಪಿಗೆ ಹೋದರೆ ಅಥವಾ ಇವರನ್ನ ನಂಬಿದ್ದ ಕೈ ಕಾರ್ಯಕರ್ತರು ಸಹ ಬಿಜೆಪಿಗೆ ಅಧಿಕೃತ ವಾಗಿ ಸೆರ್ಪಡೆ ಗೊಂಡರೆ ಎನ್ನುವುದು ರಾಜಕೀಯ ಪ್ರೇಮಿಗಳ ಪ್ರಶ್ನೆ ಯಾಗಿದೆ. ಇಷ್ಟರ ನಡುವೆ ಲಾಡ್ ಕೂಡ ನಾಗರಾಜ್ ಛೆಬ್ಬಿ ರಾಜಕೀಯ ನಡೆಗೆ ಡೋಂಟ್ ಕೆರ್ ಎಂದಂತಾಗಿದೆ.