ಸ್ಥಳೀಯ ಸುದ್ದಿ

ಜಾಲಿಕೊಪ್ಪ ಗ್ರಾಮದಲ್ಲಿ ದ್ಯಾಮವ್ವ ದುರ್ಗವ್ವ ಜಾತ್ರೆ ಸಂಭ್ರಮ

ಬೈಲಹೊಂಗಲ

ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದಲ್ಲಿ ದ್ಯಾಮವ್ವ ದುರ್ಗವ್ವ ದೇವಿ ಜಾತ್ರೆ ಹಲವಾರು ವರ್ಷಗಳ ಬಳಿಕ ನಡೆಯುತ್ತಿದೆ.

ಈ ಜಾತ್ರೆ ನಮಗೆ ಗೊತ್ತಿರುವ ಪ್ರಕಾರ ಹಿಂದೆ ಯಾವಾಗ ಆಗಿತ್ತೋ ಗೊತ್ತಿಲ್ಲಾ ಅಂತಾರೆ ಹಿರಿಯರು .

ಜಾಲಿಕೊಪ್ಪ , ಅರವಳ್ಳಿ , ಕೆಂಗಾನೂರು ಸುತ್ತಮುತ್ತಲಿನ ಗ್ರಾಮಸ್ಥರು ಈ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯುತ್ತಿದ್ದಾರೆ.

2 ವರ್ಷದ ಹಿಂದೆಯಷ್ಟೇ ದ್ಯಾಮವ್ವ ದುರ್ಗವ್ವ ಮೂರ್ತಿಯನ್ನು ಹೊಸದಾಗಿ ಮಾಡಿಸಿದ್ದು, ಊರಿನಲ್ಲಿ ಹೊನ್ನಾಟ ಆಡುವ ಮೂಲಕ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ದೇವಸ್ಥಾನದ ಮುಂದೆ ಚಿಕ್ಕದಾದ ಗುಡಿಸಲನ್ನು ಹಾಕಿದ್ದು, ಇದನ್ನು ಪಹರೆ ಕಾಯಲಾಗುತ್ತಿದೆ.

ಊರಿನ ಹೊರಗಿನ ಬೀಗರು ಈ ಜಾತ್ರೆಗೆ ಬಂದು ಸಂಭ್ರಮದಿಂದ ಪಾಲ್ಗೊಳ್ಳುವುದು ಮತ್ತೊಂದು ವಿಶೇಷ.

Related Articles

Leave a Reply

Your email address will not be published. Required fields are marked *