ಸ್ಥಳೀಯ ಸುದ್ದಿ

ಗ್ರಾಮದೇವಿಗೆ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರಕ್ಕೆ ಚಾಲನೆ

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆ ಕಣದ ಅಖಾಡ ರಂಗೇರಿದ್ದು, ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಟಿಕೆಟ್ ಘೋಷಣೆಯಾದ ಬಳಿಕವೇ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಡಲಾಗಿದೆ.

71 ಮತ ಕ್ಷೇತ್ರದ
ಶಿವಳ್ಳಿಯ ಗ್ರಾಮದೇವಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ,ವಿನಯ ಕುಲಕರ್ಣಿಯವರ ಅನುಪಸ್ಥಿತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಶ್ರೀಮತಿ ಶಿವಲೀಲಾ ವಿನಯ‌ ಕುಲಕರ್ಣಿಯವರು ಚಾಲನೆ ನೀಡಿದ್ರು.

ಮನೆ ಮನೆಗೆ ತೆರಳಿ ವಿನಯ ಕುಲಕರ್ಣಿಯವರ ಪರವಾಗಿ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಶಿವಲೀಲಾ ಕುಲಕರ್ಣಿಯವರು, ವಿನಯ ಕುಲಕರ್ಣಿಯವರ ಜನಪ್ರೀಯತೆಯನ್ನು ಸಹಿಸಲಾರದ ಕುತಂತ್ರಿಗಳು,ಷಡ್ಯಂತ್ರ ಮಾಡಿ ಅವರಿಗೆ ಧಾರವಾಡಕ್ಕೆ ಬರದ ಹಾಗೇ ನಿರಂತರ ಪ್ರಯತ್ನ ಮಾಡುತ್ತಿದ್ದು,ತಾವೆಲ್ಲಾ ಕಾರ್ಯಕರ್ತರು ಒಬ್ಬೊಬ್ಬ ಕಾರ್ಯಕರ್ತ ವಿನಯ ಕುಲಕರ್ಣಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನಮ್ಮ ಗೆಲುವು ನಿಶ್ಚಿತವಾಗಿದ್ದು,ತಾವೆಲ್ಲ ಶ್ರಮ ವಹಿಸಿ ದುಡಿಯಬೇಕು ನೀವೆ ನಮ್ಮ ಶಕ್ತಿ ಎಂದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ ಶಿವಳ್ಳಿ,ಅರವಿಂದ ಏಗನಗೌಡರ ಮುಖಂಡರುಗಳಾದ ಪರಮೇಶ್ವರ ಕಾಳೆ,ಅಣ್ಣಪ್ಪ ಚಿನಗುಡಿ,ಶಿವಾನಂದ ಲಂಬಿ,ಸಿದ್ದು ಮುಳ್ಳೂರ,ಫಿರೋಜ ನಾಯ್ಕರ,ಶಿವಪ್ಪ ತಳವಾರ,ಪಾರೂಕ ಜಮಾದಾರ,ಶಂಕರವ್ವ ಮಲ್ಲಿಗವಾಡ,ಜಯಪ್ಪ ಮುದ್ದಿ,ಮಂಜು ಸುಳ್ಳದ, ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *