ಸ್ಥಳೀಯ ಸುದ್ದಿ

ಅವಳಿನಗರದಲ್ಲಿ ಕುಡಿಯುವ ನೀರಿನ ಸರಬರಾಜು ಅಸಮರ್ಪಕ ವ್ಯವಸ್ಥೆ L & T ಕಂಪನಿಗೆ 1 ಕೋಟಿ ದಂಡ

ಧಾರವಾಡ

ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಪಾಲಿಕೆಯ ಸದಸ್ಯರು ಹಾಗೂ ಸಾರ್ವಜನಿಕರ ದೂರಿನನ್ವಯ ಮಹಾಪೌರರು, ಎಲ್ ಅಂಡ್ ಟಿ ಸಂಸ್ಥೆಯವರು ನೀಡುತ್ತಿರುವ ಸೇವೆ ಮತ್ತು ಕಾಮಗಾರಿಗಳನ್ನು ಗುತ್ತಿಗೆ ಕರಾರಿನಂತೆ ನಿರ್ವಹಿಸಲಾಗಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿ ಎಲ್ ಆ್ಯಂಡ್ ಟೀ ಕಂಪನಿಗೆ ದಂಡ ವಿಧಿಸಿದ್ರು.

ಅಲ್ಲದೇ ಪಾಲಿಕೆ ಆಯುಕ್ತರು ನೀರಿನ ಅಸಮರ್ಪಕ ನಿರ್ವಹಣೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ನೀರಿನ ನಿರ್ವಹಣೆ ದೃಢೀಕರಣವನ್ನು ಮಾಡುವ ಕಾರ್ಯವನ್ನು ಕೆಯುಐಡಿಎಫ್‌ಸಿ ಮತ್ತು ಪಿಎಂಸಿ ಸಂಸ್ಥೆಯವರು ಸಮರ್ಪಕವಾಗಿ ಮಾಡುತ್ತಿಲ್ಲ.

ನೀರು ಸರಬರಾಜು ಕಾಮಗಾರಿಗಳನ್ನು ನಿರ್ವಹಿಸುವ ಮತ್ತು ನಿರ್ವಹಣೆ ವ್ಯವಸ್ಥೆ ಬಗ್ಗೆ ಅನುಭವ ಇರುವ ಸಮರ್ಥ ಅಧಿಕಾರಿಗಳನ್ನು ನಿಯೋಜನೆ ಮಾಡದೇ ಇರುವುದರಿಂದ ಯೋಜನೆಯ ನಿರ್ಧಾರಕ ಪ್ರಗತಿಯನ್ನು ಸಾಧಿಸಲು ಮತ್ತು ಸಮರ್ಪಕವಾಗಿ ನಿರ್ವಹಣೆಯನ್ನು ಮಾಡುವಲ್ಲಿ ವಿಫಲರಾದ ಕಾರಣಗಳನ್ನು ಪರಿಗಣಿಸಿ ಸಂಬಂಧಪಟ್ಟ ಕೆಯುಐಡಿಎಫ್‌ಸಿ ಮತ್ತು ಪಿಎಂಸಿ ಅಧಿಕಾರಿಗಳ ಮಟ್ಟದಲ್ಲಿ ವಿಷಯಗಳನ್ನು ಚರ್ಚಿಸಿದರೂ, ಯಾವುದೇ ರೀತಿಯ ಪರಿಣಾಮವಾಗದೇ, ಸಾರ್ವಜನಿಕರಿಂದ ನಿರಂತರವಾಗಿ ನೀರಿನ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಿವೆ.

ಈ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಯಾವ ಅಧಿಕಾರಿಗಳು ಜವಾಬ್ದಾರಿಯುತ ಕಾರ್ಯವನ್ನು ಮಾಡದೇ ಇರುವುದನ್ನು ಗಮನಿಸಿ, ಮಹಾಪೌರರು ಎಲ್ ಅಂಡ್ ಟಿ ಅಧಿಕಾರಿಗಳನ್ನು ಜವಾಬ್ದಾರಿಯನ್ನಾಗಿಸಿ, ಸೂಕ್ತ ಕ್ರಮವನ್ನು ತೆಗೆದುಕೊಂಡು ಸಂಸ್ಥೆಯ ಮೇಲೆ ಒಂದು ಕೋಟಿ ರೂಪಾಯಿಗಳ ದಂಡಗಳನ್ನು ವಿಧಿಸಿದರು.

ಮುಂಬರು 15 ದಿನಗಳ ಒಳಗೆ ಅವಳಿ ನಗರದ ಎಲ್ಲಾ ಬೋರ್ವೆಲ್‌ಗಳನ್ನು ದುರಸ್ತಿಗೊಳಿಸಿ, ನೀರಿನ ಸರಬರಾಜು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚನೆ ನೀಡಿದರು.

Related Articles

Leave a Reply

Your email address will not be published. Required fields are marked *