ಸ್ವಚ್ಚತೆಗಾಗಿ ಹುಬ್ಬಳ್ಳಿಯಲ್ಲಿ ಮೇಯರ್ ರೌಂಡ್ಸ್
ಧಾರವಾಡ
ಅವಳಿನಗರದ ಸ್ವಚ್ಚತೆಗೆ ಮೊದಲ ಆದ್ಯತೆ ಕೊಟ್ಟು ಸ್ಮಾರ್ಟ ಸಿಟಿ ಯೋಜನೆಗೆ ಹೊಸ ಪರಿಕಲ್ಪನೆ ಕೊಟ್ಟಿರುವ ಜಮಪ್ರೀಯ ಮೇಯರ್ ಈರೇಶ ಅಂಚಟಗೇರಿ ಅವರು ಹುಬ್ಬಳ್ಳಿಯಲ್ಲಿ ರೌಂಡ್ಸ್ ನಡೆಸಿದ್ರು.
ಹುಬ್ಬಳ್ಳಿಯ ಶಿರೂರ್ ಪಾರ್ಕ್ ಮುಖ್ಯರಸ್ತೆ, ಹಾಗೂ ವಿವಿಧ ಬಡಾವಣೆಗಳಿಗೆ ತೆರಳಿ ವಾರ್ಡ್ ಗಳಲ್ಲಿನ ಸ್ವಚ್ಛತಾ ಕಾರ್ಯಗಳನ್ನು ವೀಕ್ಷಿಸಿದ್ರು.
ದಿಡೀರನೇ ಆಕಸ್ಮಿಕ ಭೇಟಿ ನೀಡಿ, ಪರಿಶೀಲನೆ ನಡೆಸಿದ ಮೇಯರ್, ಈ ಸಂದರ್ಭದಲ್ಲಿ ಸನ್ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ ರವರು ಹಾಗೂ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ ರವರ ಪ್ರಯತ್ನದಿಂದ ಈ ಭಾಗದ ರಸ್ತೆಗಳು, ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದುವ ಮೂಲಕ ಅವಳಿನಗರಕ್ಕೆ ಒಂದು ಮಾದರಿ ಭಾಗವಾಗಿದೆ.
ಆದ್ದರಿಂದ ಪ್ರತಿನಿತ್ಯವೂ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳನ್ನು ಉಪಯೋಗಿಸಿಕೊಂಡು ನಗರವನ್ನು ಸ್ವಚ್ಛವಾಗಿರಿಸಲು, ಹಾಗೂ ಸರಿಯಾದ ಟ್ಯಾಕ್ಸ್ ಹಣವನ್ನು ಕರದಾತರಿಂದ ಪಡೆಯುವ ಬಗ್ಗೆ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಹಾಗೂ ಪಾಲಿಕೆಯ ವಲಯ ಅಧಿಕಾರಿಗಳಾದ ಪಕೀರಪ್ಪ ಇಂಗಳಗಿ ರವರು, ಪಾಲಿಕೆ ಅಧಿಕಾರಿಗಳ ತಂಡದವರು ಉಪಸ್ಥಿತರಿದ್ದರು.