ಸ್ಥಳೀಯ ಸುದ್ದಿ
ಪೊಲೀಸ ಆಯುಕ್ತರಿಗೆ ದೂರು
ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಈ ಹಿಂದೆ ಬರುತ್ತಿದ್ದ ಅನಾಮಧೆಯ ಪತ್ರಗಳು ನಿರಂತರವಾಗಿ ಮುಂದುವರೆದಿವೆ.
ಹೀಗಾಗಿ ಇಂದು ಶಿವಲೀಲಾ ಕುಲಕರ್ಣಿ ಅವರು ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟರು.
ಈ ಹಿಂದೆ ಈಗಾಗಲೇ ಮಾಜಿ ಸಚಿವರ ಪತ್ನಿ ಕಾಂಗ್ರೆಸ ಮುಖಂಡೆ ಶಿವಲೀಲಾ ಕುಲಕರ್ಣಿ ಅವರು ಉಪನಗರ ಪೊಲೀಸ್ ಠಾಣೆಗೆ ದೂರು ಕೊಟ್ಟು ಪತ್ರ ಬರೆಯುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ಕೊಟ್ಟಿದ್ದರು.
ಆದ್ರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲಾ. ಪತ್ರಗಳು ಧಾರವಾಡ ಹಾಗೂ ಬೆಂಗಳೂರಿನ ಮನೆಗೆ ನಿರಂತರವಾಗಿ ಬರುತ್ತಿವೆ.
ಚುನಾವಣೆ ಸಮೀಪ ಇರುವಾಗ ಇಂತಹವನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಕಮೀಶನರ್ ಅವರಿಗೆ ಮನವಿ ಮಾಡಿದ್ರು.