ಸ್ಥಳೀಯ ಸುದ್ದಿ
2050 ರೊಳಗೆ ಹುಬ್ಬಳ್ಳಿ ಧಾರವಾಡ ಮಾದರಿ ನಗರವನ್ನಾಗಿ ಮಾಡಲು ಮೇಯರ್ ಸಂಕಲ್ಪ
ಧಾರವಾಡ
2050ನೇ ಇಸವಿಯ ಹೊತ್ತಿಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕುರಿತಾಗಿ ಹಾಗೂ ಮಾದರಿ ನಗರವನ್ನಾಗಿಸಲು ಮೇಯರ್ ಈರೇಶ ಅಂಚಟಗೇರಿ ಇಂದು ವಿಶೇಷ ಸಭೆ ನಡೆಸಿದ್ರು.
ಸಭೆಯಲ್ಲಿ ಪಾಲಿಕೆಯ ಆಯುಕ್ತರಾದ ಬಿ. ಗೋಪಾಲಕೃಷ್ಣ, ಜಲಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಾನಂದ, ಹಾಗೂ ಕೆ.ಯು.ಐ.ಡಿ.ಎಫ್.ಸಿ ಅಧಿಕಾರಿಗಳು ಉಪಸ್ಥಿತರಿದ್ದು, ಅವರೊಂದಿಗೆ ಪಾಲಿಕೆಯ ಮಹಾಪೌರರು ಸಮಗ್ರ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆಗಾಗಿ ಕೈಗೊಳ್ಳಬೇಕಾದ ಕಾಮಗಾರಿಯ ಬಗ್ಗೆ ಇದೇ ತಿಂಗಳ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸುವ ಬಗ್ಗೆಯೂ ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಿಲಾಯಿತು.
ಈ ವೇಳೆಯಲ್ಲಿ ಪಾಲಿಕೆಯ ಸಹಾಯಕ ಆಯುಕ್ತರು, ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.