ಸ್ಥಳೀಯ ಸುದ್ದಿ
RSSನ ಧಾರವಾಡ ಜಿಲ್ಲೆಯ ಸಂಘ ಚಾಲಕ ನಿಧನ
ಧಾರವಾಡ
ರಾಷ್ಟ್ರೀಯ ಸ್ವಯಂ ಸೇವಾ ಸಂಘ ಧಾರವಾಡ ಜಿಲ್ಲಾ ಸಂಘ ಚಾಲಕರು, ಯುವ ಸ್ವಯಂ ಸೇವಕರ ಪ್ರೇರಣಾಕರ್ತರು, ಹಾಗೂ ವೀರಶೈವ ಲಿಂಗಾಯತ ಧರ್ಮದ ಮುಖಂಡರು ಹಾಗೂ ಧಾರವಾಡದ ಪ್ರತಿಷ್ಟಿತ ವರ್ತಕರಾಗಿದ್ದ ಶ್ರೀ ಮಲ್ಲಿಕಾರ್ಜುನ ನಡಕಟ್ಟಿ ರವರು ಇಂದು ತಮ್ಮ 81 ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.
ಅವರ ಅಕಾಲಿಕ ನಿಧನದಿಂದ ಮನಸ್ಸಿಗೆ ಅತೀವ ದುಃಖವಾಗಿದೆ.
ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಿ, ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಹ್ಲಾದ ಜೋಷಿ
ಸಂಸದೀಯ ವ್ಯವಹಾರಗಳು, ಕೇಂದ್ರ ಕಲ್ಲಿದ್ದಲು, ಗಣಿ ಸಚಿವರು ಹಾಗೂ ಈರೇಶ ಅಂಚಟಗೇರಿ, ಮಹಾಪೌರರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರವರು ಸಂತಾಪ ಸೂಚಿಸಿದ್ದಾರೆ.