ಸ್ಥಳೀಯ ಸುದ್ದಿ
ಸಂಭ್ರಮದ ಶಿವಾಜಿ ಜಯಂತಿ ಆಚರಣೆ
ಧಾರವಾಡ
ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಧಾರವಾಡದ ಶಿವಾಜಿ ವೃತ್ತದಲ್ಲಿರುವ ಶ್ರೀ ಶಿವಾಜಿ ಮಹಾರಾಜರ ಮೂರ್ತಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ ರವರು, ಹೆಚ್ಚುವರಿ ಆಯುಕ್ತರಾದ ಶಂಕರಾನಂದ ಬನಶಂಕರಿ ರವರು, ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಿಜಯಾನಂದ ಶೆಟ್ಟಿ ರವರು, ಶ್ರೀ ಸುರೇಶ ಬೆದರೆ ರವರು, ಶಂಕರ ಶೇಳಕೆ ರವರು, ಸುನಿಲ ಮೋರೆ ರವರು, ಪಾಲಿಕೆಯ ಸಹಾಯಕ ಆಯುಕ್ತರಾದ ಆರ್.ಎಂ.ಕುಲಕರ್ಣಿ ರವರು, ಎಸ್.ಸಿ.ಬೇವೂರ ರವರು, ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳಾದ ಗುರುಸಿದ್ದಪ್ಪ ಡಂಬಳ ರವಾರು ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.